ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರ, ಈಗ ಯುಗಾದಿ ಗಿಫ್ಟ್ ಬೇರೆ ನೀಡಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ದಾಖಲೆ ಮಟ್ಟಕ್ಕೆ ಏರಿಸಿದೆ.
ಕಮರ್ಷಿಯಲ್ ಬಳಕೆಯ 19ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಎಕ್ ಧಮ್ ಬರೋಬ್ಬರಿ 273 ರೂಪಾಯಿ ಹೆಚ್ಚಿಸಿದೆ.
ಪರಿಣಾಮ ಈಗ ಬೆನಗಳೂರಿನಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಳೆ 2200 ರೂಪಾಯಿ ದಾಟಿದೆ. ಹೋಟೆಲ್ ಮಾಲೀಕರು ಕಂಗಲಾಗಿದ್ದಾರೆ. ಈ ವಾರದೊಳಗೆ ಮತ್ತೊಮ್ಮೆ ಊಟ, ತಿಂಡಿಗಳ ಬೆಲೆಯನ್ನು ಹೆಚ್ಚಿಸುವ ಸಂಭವ ಇದೆ.
ಇನ್ನು ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸಧ್ಯಕ್ಕೆ ಯಾವುದೇ ಬದಲಾವಣೆ ಆಗಿಲ್ಲ