ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022 ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಶುಕ್ರವಾರ ಭಾರತಕ್ಕೆ ಕುಸ್ತಿಯಲ್ಲಿ 3 ಚಿನ್ನದ ಪದಕ ಒಲಿದುಬಂದಿವೆ.
ಗುರುವಾರ ನಡೆದ ಕುಸ್ತಿ ಪಂದ್ಯಾಟಗಳಲ್ಲಿ ಭಾರತದ ಭಜರಂಗ್ ಪೂನಿಯಾ ಕೆನಡಾದ ಲಾಚ್ಲಾನ್ ಮೆಕ್ನೀಲ್ ಅವರನ್ನು ಪುರುಷರ 65 ಕೆಜಿ ವಿಭಾಗದಲ್ಲಿ ಸೋಲಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಅನಂತರ ಕೆಲವೇ ನಿಮಿಷಗಳಲ್ಲಿ 2016 ರ ರಿಯೋ ಒಲಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತರಾಗಿದ್ದ ಸಾಕ್ಷಿ ಮಲಿಕ್, ಮಹಿಳೆಯರ 62 ಕೆಜಿ ವಿಣಾಗದಲ್ಲಿ ಕೆನಾಡಾದ ಅನಾ ಗೋಂಜಲೆಜ್ ರನ್ನು ಮಣಿಸಿ ಚಿನ್ನದ ಪದಕ ವಿಜೇತರಾದರು.
ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ದೀಪಕ್ ಪೂನಿಯಾ ಪುರುಷರ 86 ಕೆಜಿ ವಿಭಾಗದಲ್ಲಿ ಪಾಕಿಸ್ತಾನದ ಮೊಹಮ್ಮದ್ ಇನಾಂರನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಆ ಮೂಲಕ ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಇದುವರೆಗೂ 9 ಚಿನ್ನದ ಪದಕಗಳು, 8 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ದೊರೆತಿವೆ.