ADVERTISEMENT
ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಕ್ರಿಕೆಟ್ ಪಂದ್ಯದಲ್ಲಿ ಭಾರತ ಫೈನಲ್ ಲಗ್ಗೆ ಇಟ್ಟು ಹೊಸ ಇತಿಹಾಸ ನಿರ್ಮಿಸಿದೆ.
ಈ ಮೂಲಕ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಭಾರತಕ್ಕೆ ಕನಿಷ್ಠ ಬೆಳ್ಳಿಯಾದರೂ ಸಿಗುವುದು ಖಚಿತವಾಗಿದೆ.
ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರು ಬ್ರಿಟನ್ ಮಹಿಳಾ ತಂಡವನ್ನು 4 ರನ್ಗಳಿಂದ ಸೋಲಿಸಿದ್ದಾರೆ.
ರೋಚಕವಾಗಿ ಕೂಡಿದ್ದ ಹಣಾಹಣಿಯಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ಆದರೆ 20 ಓವರ್ಗಳಲ್ಲಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ಸ್ಮೃತಿ ಮಂಧನ 61 ಮತ್ತು ಜೆ ರೋಡಿಗ್ರಸ್ 44 ರನ್ ಗಳಿಸಿದರು.
ADVERTISEMENT