ಗ್ರಾಹಕರಿಂದ ಸುಲಿಗೆಗೆ ಇಳಿದಿರುವ ಓಲಾ ಮತ್ತು ಊಬರ್ ವಿರುದ್ಧ ವಿರುದ್ಧ ಗ್ರಾಹಕರಿಂದ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಪ್ರಯಾಣ ದರ ವಿಪರೀತ ದುಬಾರಿ ಆಗಿರುವುದು ಮತ್ತು ಒಂದು ವೇಳೆ ಪ್ರಯಾಣ ರದ್ದುಪಡಿಸಿದರೇ ಆ ದಂಡವನ್ನು ಪ್ರಯಾಣಿಕರೇ ಭರಿಸಬೇಕೆಂಬ ನಿಯಮಗಳಿಂದ ರೋಸಿ ಹೋಗಿರುವ ಗ್ರಾಹಕರು ನೀಡಿದ್ದ ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಓಲಾ ಮತ್ತು ಊಬರ್ ಕಂಪನಿಗಳ ಪ್ರತಿನಿಧಿಗಳ ಜೊತೆಗೆ ಕೇಂದ್ರ ಸರ್ಕಾರ ಸಭೆ ನಡೆಸಿ ಎಚ್ಚರಿಕೆ ನೀಡಿದೆ.
ಗ್ರಾಹಕ ಸಚಿವಾಲಯದ ನಡೆಸಿದ್ದ ಈ ಸಭೆಯಲ್ಲಿ ಓಲಾ, ಊಬರ್ ಮಾತ್ರವಲ್ಲದೇ ಮೆರು, ರ್ಯಾಪಿಡೋ, ಜುಗ್ನು ಕಂಪನಿಗಳ ಪ್ರತಿನಿಧಿಗಳ ಪಾಲ್ಗೊಂಡಿದ್ದರು.
`ಒಂದು ತಿಂಗಳೊಳಗಾಗಿ ಮೋಟಾರು ವಾಹನ ಅಗ್ರಿಗ್ರೇಟರ್ ಮಾರ್ಗಸೂಚಿಗಳನ್ನು ಪಾಲಿಸಬೇಕು, ಇಲ್ಲವಾದಲ್ಲಿ ದಂಡ ತೆರಲು ಸಿದ್ಧರಾಗಿ’ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.
ಅಲ್ಲದೇ ಶೀಘ್ರವೇ ಕೇಂದ್ರ ಗ್ರಾಹಕ ಹಿತರಕ್ಷಣೆ ಪ್ರಾಧಿಕಾರ ಆಪ್ ಆಧಾರಿತ ವಾಹನ ಸೇವೆ ನೀಡುತ್ತಿರುವ ಕಂಪನಿಗಳಿಗೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಿದೆ.
ಪ್ರಯಾಣಿಕರಿಗೆ ತಮಗಾಗುವ ತೊಂದರೆಗಳ ಬಗ್ಗೆ ದೂರು ನೀಡಲು ಅನುಕೂಲವಾಗುವಂತೆ ರಾಷ್ಟಿçÃಯ ಗ್ರಾಹಕರ ಸಹಾಯವಾಣಿಗೆ ಕಂಪನಿಗಳು ಸೇರ್ಪಡೆ ಆಗಬೇಕು, 2019ರ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಪಾಲಿಸಬೇಕು ಮತ್ತು 2020ರ ಇ-ಕಾರ್ಮಸ್ (ಆನ್ಲೈನ್ ವ್ಯವಹಾರ)ದ ನಿಯಮಗಳನ್ನೂ ಅನುಸರಿಸಬೇಕು ಎಂದು ಕೇಂದ್ರ ಸರ್ಕಾರ ಓಲಾ ಮತ್ತು ಊಬರ್ಗೆ ಸೂಚಿಸಿದೆ.
ಪ್ರಯಾಣಿಕರು ರೈಡಿಂಗ್ ಬುಕ್ ಮಾಡಿದ ಮೇಲೆ ಆ ಸ್ಥಳಕ್ಕೆ ಬರಲು ಒಪ್ಪದ ಚಾಲಕರು ಪ್ರಯಾಣಿಕರಿಂದಲೇ ರೈಡಿಂಗ್ ರದ್ದುಪಡಿಸುತ್ತಿದ್ದರು. ಆ ಮೂಲಕ ಪ್ರಯಾಣಿಕರೇ ದಂಡ ಪಾವತಿಸುವಂತೆ ಕಿರುಕುಳ ನೀಡುತ್ತಿದ್ದರು. ಚಾಲಕರ ಈ ವರ್ತನೆ ವಿರುದ್ಧ ಪ್ರಯಾಣಿಕರು ದೂರು ನೀಡಿದ್ದರು.
ಇದರ ಜೊತೆಗೆ ಪ್ರಯಾಣಿಕರು ರೈಡಿಂಗ್ ರದ್ದುಪಡಿಸಿದರೆ ಆಗ ಪ್ರಯಾಣದ ದರ ಶೇಕಡಾ 10ರಷ್ಟನ್ನು ಅಥವಾ ಗರಿಷ್ಠ 100 ರೂಪಾಯಿ ದಂಡ ಪಾವತಿಸಬೇಕಿದೆ.
ಇದಲ್ಲದೇ ಪ್ರಯಾಣದ ದರವನ್ನು ಓಲಾ ಮತ್ತು ಊಬರ್ ಮೂಲದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ವಸೂಲಿ ಮಾಡುತ್ತಿದೆ ಎಂಬ ಆರೋಪಗಳೂ ಗ್ರಾಹಕ ಸಚಿವಾಲಯಕ್ಕೆ ಬಂದಿತ್ತು.