ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತಹಾಕುವಂತೆ ಕರ್ನಾಟಕ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ.
ಜೂನ್ 10ರಂದು ಬೆಳಗ್ಗೆ 9 ಗಂಟೆಯಿAದ ಸಂಜೆ 4 ಗಂಟೆವರೆಗೆ ನಡೆಯುವ ಮತದಾನದಲ್ಲಿ ಹಾಜರಿದ್ದು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕುವಂತೆ
ಶಾಸಕರೂ ಆಗಿರುವ ಪಕ್ಷದ ಮುಖ್ಯ ಸಚೇತಕರೂ ಡಾ ಅಜಯ್ ಸಿಂಗ್ ಪಕ್ಷದ ಪರವಾಗಿ ವಿಪ್ ಜಾರಿ ಮಾಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಶಾಸಕರ ಬಳಿ 70 ಶಾಸಕರ ಮತಗಳಿವೆ. ಒಬ್ಬ ಅಭ್ಯರ್ಥಿ ಗೆಲ್ಲಲು 45 ಮತಗಳು ಅಗತ್ಯ. ಜೈರಾಂ ರಮೇಶ್ ಅವರ ಜೊತೆಗೆ ಮನ್ಸೂರ್ ಅಲಿ ಖಾನ್ ಅವರನ್ನು ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಕಾಂಗ್ರೆಸ್ನ ಹೆಚ್ಚುವರಿ ಅಭ್ಯರ್ಥಿಗೆ ಗೆಲ್ಲಲು 21 ಮತಗಳ ಕೊರತೆ ಕಾಡಲಿದೆ.