ನೀಟ್ (ರಾಷ್ಟಿçÃಯ ಅರ್ಹತಾ ಪ್ರವೇಶ ಪರೀಕ್ಷೆ) ಪಾಸಾಗಿದ್ದರೂ ಎಂಬಿಬಿಎಸ್ ಸೀಟು ಸಿಗದ ವಿದ್ಯಾರ್ಥಿಗೆ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಮತ್ತು ಅವರ ಸಹೋದರ ಕಾಂಗ್ರೆಸ್ ಎಂಎಲ್ಸಿ ಸುನಿಲ್ಗೌಡ ಪಾಟೀಲ್ ಹಣಕಾಸು ನೆರವು ನೀಡಿದ್ದಾರೆ.’
ವಿಜಯಪುರ ಜಿಲ್ಲೆಯ ಕಲಕೇರಿಯ ಬಡಕುಟುಂಬದ ದೇವಿಂದ್ರ ಎಸ್.ರಕ್ಕಸಗಿ ಅವರಿಗೆ ಬಿಎಲ್ಡಿ ಸಂಸ್ಥೆ ವತಿಯಿಂದ 8 ಲಕ್ಷದ 87 ಲಕ್ಷ ರೂಪಾಯಿ ನೆರವು ಘೋಷಿಸಲಾಗಿದೆ. ಇದರಲ್ಲಿ ಮೊದಲ ಕಂತಿನ ಭಾಗವಾಗಿ 2 ಲಕ್ಷದ 32 ಸಾವಿರ ರೂಪಾಯಿ ಮೊತ್ತದ ಚೆಕ್ನ್ನು ಎಂಎಲ್ಸಿ ಸುನಿಲ್ಗೌಡ ಪಾಟೀಲ್ ಅವರು ವಿದ್ಯಾರ್ಥಿ ದೇವೀಂದ್ರಗೆ ವಿತರಿಸಿದರು.
`ಕಲಕೇರಿಯ ಬಡಕುಟುಂಬದ ದೇವಿಂದ್ರ ಎಸ್.ರಕ್ಕಸಗಿ ನೀಟ್ ಪಾಸಾದ್ರೂ ಬಿಎಎಂಎಸ್ ಪ್ರವೇಶ ಪಡೆಯಲಾಗದೆ ಕಷ್ಟದಲ್ಲಿದ್ದರು.ನನ್ನ ಸಹೋದರ ಶ್ರೀ.ಎಂ.ಬಿ. ಪಾಟೀಲ ಅವರು ವಿಷಯ ತಿಳಿದು ಸಹಾಯಹಸ್ತ ಚಾಚಿದ್ದಾರೆ.ಅವರ ಸೂಚನೆಯಂತೆ ಬಿ ಎಲ್ ಡಿ ಇ ಸಂಸ್ಥೆಯಿAದ ರೂ.8.87 ಲಕ್ಷ ನೆರವು ನೀಡಲಾಗುತ್ತಿದೆ.ಮೊದಲ ಕಂತು ರೂ.2.32ಲಕ್ಷ ಚೆಕ್ ವಿತರಿಸಿ ಶುಭ ಕೋರಿದ್ದೇನೆ’ ಎಂದು ಸುನಿಲ್ಗೌಡ ಪಾಟೀಲ್ ಟ್ವೀಟಿಸಿದ್ದಾರೆ.