ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ ಆರ್ ಸೀತಾರಾಂ ಅವರು ಕಾಂಗ್ರೆಸ್ ಬಿಡುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ನಲ್ಲಿ ತಮಗೆ ಆಗಿರುವ ಅನ್ಯಾಯದ ಬಗ್ಗೆ ಪಟ್ಟಿ ಮಾಡಿರುವ ಎಂ ಆರ್ ಸೀತಾರಾಂ ಅವರು ಇದೇ ಜೂನ್ 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ತಮ್ಮ ಆಪ್ತರು ಮತ್ತು ಬೆಂಬಲಿಗರ ಸಭೆ ಕರೆದಿದ್ದಾರೆ.
ಆ ಸಭೆಗೆ ಆಗಮಿಸಿ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವಂತೆ ಎಂಆರ್ ಸೀತಾರಾಂ ಅವರು ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಂ ಆರ್ ಸೀತಾರಾಂ ಅವರ ಹೆಸರನ್ನು ಹೈಕಮಾಂಡ್ಗೆ ಶಿಫಾರಸ್ಸು ಮಾಡಿದ್ದರು. ಆದ್ರೆ ಎಂ ಆರ್ ಸೀತಾರಾಂ ಅವರನ್ನು ಹೈಕಮಾಂಡ್ ಪರಿಗಣಿಸಿರಲಿಲ್ಲ. ಇದರಿಂದ ಸೀತಾರಾಂ ಅವರು ಅಸಮಾಧಾನಗೊಂಡಿದ್ದಾರೆ.
2008ರಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಪ್ರಭಾವಿಗಳ ಕಾರಣದಿಂದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಸೋಲಾಯ್ತು ಎಂದು ತಮಗಾದ ಅನ್ಯಾಯದ ಬಗ್ಗೆ ಪಟ್ಟಿ ಮಾಡಿರುವ ಎಂಆರ್ ಸೀತಾರಾಂ ಅವರು, 2009ರಲ್ಲೂ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಚಿತಾವಣೆಯಿಂದ ಟಿಕೆಟ್ ತಪ್ಪಿತು ಎಂದಿದ್ದಾರೆ.
2018ರಲ್ಲಿ ವಿಧಾನಪರಿಷತ್ಗೆ ಮತ್ತೆ ಆಯ್ಕೆ ಆಗಲು ಅವಕಾಶ ನಿರಾಕರಿಸಲಾಯಿತು ಮತ್ತು 2022ರಲ್ಲೂ ಅವಕಾಶ ನಿರಾಕರಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2016ರಲ್ಲಿ ಇವರು ಸಿದ್ದರಾಮಯ್ಯ ಸರ್ಕಾರದಲ್ಲಿ ಯೋಜನೆ ಮತ್ತು ಸಾಂಖಿಕ ಸಚಿವರಾಗಿದ್ದರು ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
ರಾಮಯ್ಯ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಎಂ ಆರ್ ಸೀತಾರಾಂ ನಡೆಸುತ್ತಿದ್ದಾರೆ.
ಇವರ ಪುತ್ರ ರಕ್ಷಾ ರಾಮಯ್ಯ ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದರು ಮತ್ತು ಕೆಲ ದಿನಗಳ ಹಿಂದೆಯಷ್ಟೇ ಯುವ ಕಾಂಗ್ರೆಸ್ನ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.