ADVERTISEMENT
ಬೆಲೆ ಏರಿಕೆ ವಿರುದ್ಧ ದೇಶದ ರಾಜಧಾನಿ ದೆಹಲಿಯಲ್ಲಿರುವ ರಾಮಲೀಲಾ ಮೈದಾನ (Ramaleela Maidan)ದಲ್ಲಿ ಕಾಂಗ್ರೆಸ್ (Congress) ಬೃಹತ್ ಪ್ರತಿಭಟನಾ ಸಮಾವೇಶ ಕೈಗೊಂಡಿತು.
ಪ್ರತಿಭಟನಾ ಸಮಾವೇಶದಲ್ಲಿ ಮಾತಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ (BJP) ಮತ್ತು ಆರ್ಎಸ್ಎಸ್ (RSS) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಭಾಷಣದ ಪ್ರಮುಖ ಅಂಶಗಳು:
1. ಬಿಜೆಪಿ ಮತ್ತು ಸಂಘ ಪರಿವಾರ ದೇಶವನ್ನು ವಿಭಜಿಸುತ್ತಿದೆ. ಗೊತ್ತಾಗಿದ್ದೇ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಜನರನ್ನು ಭಯ ಬೀಳಿಸಿ ದ್ವೇಷ ಹಬ್ಬಿಸುತ್ತಿದೆ.
2. ನಮಗೆ ಎಲ್ಲ ರಸ್ತೆಗಳು ಮುಚ್ಚಿ ಹೋಗಿವೆ. ನಮಗೆ ಈಗ ಒಂದು ಮಾರ್ಗವಷ್ಟೇ ಉಳಿದಿದೆ – ಅದು ದೇಶದ ಜನರ ಬಳಿಗೆ ಹೋಗಿ ಸತ್ಯವನ್ನು ಹೇಳುವುದು, ಜನರ ಮಾತುಗಳನ್ನು ಕೇಳುವುದು ಅಥವಾ ಅವರಿಗೆ ಅರಿವು ಮೂಡಿಸುವುದು.
3. ಕಾಂಗ್ರೆಸ್ ದೇಶವನ್ನು ಜೋಡಿಸುತ್ತದೆ. ದ್ವೇಷವನ್ನು ತೊಲಗಿಸುತ್ತದೆ. ದ್ವೇಷವನ್ನು ತೊಲಗಿಸಿದಾಗ ಭಯ ದೂರವಾಗಿ ದೇಶ ಒಟ್ಟಾಗುತ್ತದೆ.
4. ಕಳೆದ 40 ವರ್ಷಗಳಲ್ಲಿ ಅಧಿಕ ನಿರುದ್ಯೋಗ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿದೆ. ನಿರುದ್ಯೋಗ, ಬೆಲೆ ಏರಿಕೆ, ದ್ವೇಷದಿಂದ ದೇಶ ಬಲಿಷ್ಠವಾಗಲು ಸಾಧ್ಯನಾ..?
5. ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧ ಮಾಡಿದರು. ನೋಟು ನಿಷೇಧದಿಂದ ಬಡ ಜನರಿಗೆ ಆದ ಲಾಭವೇನು..? ಜನರ ಜೇಬಿನಿಂದ ಹಣ ಕಸಿದುಕೊಳ್ಳಲಾಯ್ತು, ಬಡ ಜನರಿಗೆ ಹೇಳಲಾಯ್ತು ಇದು ಕಪ್ಪು ಹಣದ ವಿರುದ್ಧದ ಹೋರಾಟ ಎಂದು. ಆದ್ರೆ ಈ ಸರ್ಕಾರ ದೊಡ್ಡ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿತು.
6. ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರದ ಅವಧಿಯಲ್ಲಿ 23 ಕೋಟಿ ಮಂದಿ ಮತ್ತೆ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಆದ್ರೆ ನಾವು 10 ವರ್ಷಗಳಲ್ಲಿ 27 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದೇವು.
7. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇರುವವರ ವಿರುದ್ಧ ಸಿಬಿಐ, ಈಡಿ, ಐಟಿ ತನಿಖಾ ಸಂಸ್ಥೆಗಳನ್ನು ಬಿಡಲಾಗುತ್ತಿದೆ. ನನ್ನನ್ನು ಈಡಿ 55 ಗಂಟೆ ವಿಚಾರಣೆ ನಡೆಸಿತು. ಆದರೆ ನಾನು ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ, ನಾನು ನಿಮ್ಮ ಈಡಿಗೆ ಹೆದರುವವನಲ್ಲ.
8. ಭಾರತದ ಸಂಸ್ಥೆಗಳು ಮಾಧ್ಯಮ, ನ್ಯಾಯಾಂಗ, ಚುನಾವಣಾ ಆಯೋಗದ ಮೇಲೆ ಒತ್ತಡಗಳಿವೆ. ಇವುಗಳ ಮೇಲೆ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ. ಹೀಗಾಗಿ ನಾವು ಜನರ ಬಳಿಗೆ ಹೋಗುವುದು ಮಹತ್ವ. ಭಾರತ್ ಜೋಡೋ ಯಾತ್ರೆ ಆ ಕಾರಣಕ್ಕೆ ಮುಖ್ಯ.
9. ಟಿವಿ ನ್ಯೂಸ್ ಚಾನೆಲ್ಗಳು ಇಬ್ಬರು ಉದ್ಯಮಿಗಳಾಗಿದ್ದೆ, ಪತ್ರಿಕೆಗಳು ಇಬ್ಬರು ಉದ್ಯಮಿಗಳ ಕೈಯಲ್ಲಿದೆ.
ADVERTISEMENT