ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮನ್ನು ದೋಷಿ ಎಂದು ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಸೂರತ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಹುಲ್ ಅವರು ಗುಜರಾತ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕೆಳಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ ರಾಹುಲ್ ಅವರ ಮೇಲ್ಮನವಿಯನ್ನು ವಜಾಗೊಳಿಸಿತ್ತು.
ರಾಹುಲ್ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಮೂಲ ಅರ್ಜಿದಾರರಾಗಿರುವ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸುಪ್ರೀಂಕೋರ್ಟ್ನಲ್ಲಿ ಕೇವಿಯೇಟ್ ಸಲ್ಲಿಸಿದ್ದಾರೆ.
ಕೇವಿಯೇಟ್ ಸಲ್ಲಿಕೆ ಹಿನ್ನೆಲೆಯಲ್ಲಿ ರಾಹುಲ್ ಅವರ ಅರ್ಜಿಯ ಮೇಲೆ ಆದೇಶ ಕೊಡುವುದಕ್ಕೂ ಮೊದಲು ಪೂರ್ಣೇಶ್ ಮೋದಿಯವರ ವಾದವನ್ನು ಆಲಿಸಬೇಕಾಗುತ್ತದೆ.
ಒಂದು ವೇಳೆ ರಾಹುಲ್ ಅವರಿಗೆ ವಿಧಿಸಲಾಗಿರುವ ದೋಷಿ ಮತ್ತು ಶಿಕ್ಷೆಯ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದರೆ ಆಗ ತತ್ಕ್ಷಣವೇ ಅವರ ಸಂಸದ ಸ್ಥಾನ ಮರಳಿ ಸಿಗುತ್ತದೆ. ಒಂದು ವೇಳೆ ತಡೆಯಾಜ್ಞೆ ನೀಡದೇ ವಿಚಾರಣೆಯನ್ನು ಮುಂದೂಡಿದರೆ ಅನರ್ಹತೆ ಮುಂದುವರಿಯುತ್ತದೆ.
ಮಾರ್ಚ್ 23ರಂದು ಸೂರತ್ ನ್ಯಾಯಾಲಯ ರಾಹುಲ್ ವಿರುದ್ಧ ತೀರ್ಪು ನೀಡಿತ್ತು. ಮಾರ್ಚ್ 23ರಿಂದಲೇ ಅನ್ವಯವಾಗುವಂತೆ ರಾಹುಲ್ ಅವರ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಮಾರ್ಚ್ 24ರಂದು ಲೋಕಸಭಾ ಸ್ಪೀಕರ್ ಅದೇಶಿಸಿದ್ದರು. ಆ ಬಳಿಕ ಏಪ್ರಿಲ್ 16ರಂದು ರಾಹುಲ್ ಅವರು ತಮ್ಮ ಹಂಚಿಕೆಯಾಗಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರು.
ADVERTISEMENT
ADVERTISEMENT