ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದು ಭಾನುವಾರ ವಾಪಸ್ ಆಗಲಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿ ಯುರೋಪ್ಗೆ ತೆರಳಿದ್ದಾರೆ.
ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ನಡೆಯಬೇಕಿರುವ ಚುನಾವಣೆ ಬಗ್ಗೆ ಗುರುವಾರ ಸಭೆ ನಡೆಯಲಿದೆ. ಆ ಸಭೆಗೆ ರಾಹುಲ್ ಗೈರಾಗಲಿದ್ದಾರೆ.
ಅಕ್ಟೋಬರ್ 2ರಿಂದ ಭಾರತ ಜೋಡಿಸುವ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಲಿದ್ದು, ಆ ಬಗ್ಗೆ ಗುರುವಾರದ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
ಈ ಮಹತ್ವದ ಸಭೆಗೆ ರಾಹುಲ್ ಗಾಂಧಿ ಗೈರಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.