ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಅಧಿಕೃತವಾಗಿ ಗೃಹ ಸಚಿವರು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಪಿಎಸ್ಐ ಅಕ್ರಮ ನೇಮಕಾತಿಯನ್ನು ಒಪ್ಪಿಕೊಂಡಿರುವ ಆರಗ ಜ್ಞಾನೇಂದ್ರ ಅವರು ನೈತಿಕವಾಗಿ ಗೃಹ ಸಚಿವರಾಗಿ ಮುಂದುವರೆಯಲು ಸಾದ್ಯವಿಲ್ಲ ಎಂದು ಹೇಳಿದ್ದರು.
ಸಿದ್ದರಾಮಯ್ಯನವರ ಟ್ವೀಟ್ಗೆ ಪತ್ರಿಕ್ರಿಯೆ ನೀಡಿರುವ ಸಚಿವ ಆರಗ ಜ್ಞಾನೇಂದ್ರ ಅವರು, ರಾಜ್ಯದಲ್ಲಿ ಪ್ರಾಮಾಣಿಕ ಸರ್ಕಾರ ಇರುವುದಕ್ಕೆ ನೇಮಕಾತಿ ರದ್ದುಪಡಿಸಿ ಮರುಪರೀಕ್ಷೆ ನಡೆಸಲಾಗುತ್ತಿದೆ. ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದ್ದು ತನಿಖೆಯಿಂದ ಪೂರ್ಣ ಸತ್ಯ ಬಯಲಿಗೆ ಬರಲಿದೆ.
ಸಿದ್ದರಾಮಯ್ಯನವರು ತಮ್ಮ ಪಕ್ಷದ ನಾಯಕರನ್ನು ಸಮರ್ಥಿಸಲು ಇತರರ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಾಮಾಣಿಕ ಸರ್ಕಾರ ಇರುವುದಕ್ಕೆ ನೇಮಕಾತಿ ರದ್ದುಪಡಿಸಿ ಮರುಪರೀಕ್ಷೆ ನಡೆಸಲಾಗುತ್ತಿದೆ. ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದ್ದು ತನಿಖೆಯಿಂದ ಪೂರ್ಣ ಸತ್ಯ ಬಯಲಿಗೆ ಬರಲಿದೆ. @siddaramaiah ನವರು ತಮ್ಮ ಪಕ್ಷದ ನಾಯಕರನ್ನು ಸಮರ್ಥಿಸಲು ಇತರರ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಲಿ@CMofKarnataka @BJP4Karnataka https://t.co/xm3wn81Vf0
— Araga Jnanendra( ಮೋದಿ ಅವರ ಕುಟುಂಬ) (@JnanendraAraga) May 1, 2022
ಈ ಮೂಲಕ ಗೃಹ ಸಚಿವರು ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆಯೆಂದು ಅಧಿಕೃತವಾಗಿ ಹೇಳಿದಂತಾಗಿದೆ. ಆದರೆ, ಯಾವ ನಾಯಕರು ಈ ಅಕ್ರಮದ ಹಿಂದೆ ಇದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
ಪಿಎಸ್ಐ ಅಕ್ರಮದ ನೇಮಕಾತಿ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿಗೆ ನೋಟಿಎಸ್ ನೀಡಿದೆ.