ವಿಧಾನಪರಿಷತ್ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಮುನ್ನಡೆಯಲ್ಲಿದ್ದಾರೆ.
ಹುಕ್ಕೇರಿ ಅವರಿಗೆ ಮೊದಲ ಪ್ರಾಶಸ್ತö್ಯದ 4,826 ಮತಗಳು ಸಿಕ್ಕಿವೆ. ಬಿಜೆಪಿ ಅಭ್ಯರ್ಥಿ ಹಾಲಿ ಪರಿಷತ್ ಸದಸ್ಯರಾಗಿರುವ ಅರುಣ್ ಶಹಾಪುರ ಅವರಿಗೆ 3,124 ಮತಗಳು ಸಿಕ್ಕಿವೆ. ಈ ಮೂಲಕ ಹುಕ್ಕೇರಿ ಅವರು 1,702 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಶಿಕ್ಷಕರು ಮತದಾನ ಮಾಡಿದ್ದರು. ಒಟ್ಟು 25,386 ಮತದಾರರಲ್ಲಿ ಶೇಕಡಾ 84ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು.