ADVERTISEMENT
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿ ಕುಚೋದ್ಯ ಮಾಡಿದ್ದ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ರಂಜನ್ ಚೌಧರಿ ತಮ್ಮ ಅವಿವೇಕಿತನದ ಹೇಳಿಕೆಗೆ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕ್ಷಮಾಪಣಾ ಪತ್ರ ಬರೆದಿದ್ದಾರೆ.
ನೀವು ಅಲಂಕರಿಸಿರುವ ಹುದ್ದೆಯನ್ನು ಬಣ್ಣಿಸುವಾಗ ನಾನು ತಪ್ಪು ಪದವನ್ನು ಬಳಸಿದ್ದೆ. ಅದು ನಾಲಗೆ ಜಾರಿಯಾಡಿದ ಮಾತು ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ.
ನಾನು ನಿಮ್ಮಲ್ಲಿ ಕ್ಷಮೆಯಾಚಿಸ್ತೇನೆ ಮತ್ತು ನನ್ನ ಕ್ಷಮಾಪಣೆಯನ್ನು ಸ್ವೀಕರಿಸುವಂತೆ ಕೋರುತ್ತೇನೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕಾಂಗ್ರೆಸ್ ಸಂಸದನ ಮಾತಿನಿಂದ ಸೃಷ್ಟಿ ಆದ ವಿವಾದ ಲೋಕಸಭೆಯಲ್ಲಿ ನಿನ್ನೆ ಕೋಲಾಹಲ ಎಬ್ಬಿಸಿತ್ತು.
ADVERTISEMENT