ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.
ಗುಜರಾತ್ ಕಾಂಗ್ರೆಸ್ನ ಅಧ್ಯಕ್ಷರಾಗಿ ಸಂಸದ ಶಕ್ತಿಸಿನ್ಹಾ ಗೋಯಿಲ್ ಅವರನ್ನು ನೇಮಿಸಲಾಗಿದೆ.
ಪುದಚೇರಿ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸಂಸದ ವಿ ವೈದ್ಯಲಿಂಗಂ ಅವರನ್ನು ನೇಮಿಸಲಾಗಿದೆ.
ಶಾಸಕರಾದ ವರ್ಷ ಗಾಯ್ಕ್ವಾಡ್ ಅವರನ್ನು ಮುಂಬೈ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ತೆಲಂಗಾಣಕ್ಕೆ ಉಸ್ತುವಾರಿಗಳ ನೇಮಕ:
ಈ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣ ಉಸ್ತುವಾರಿಯಾಗಿ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಅವರನ್ನು ನೇಮಿಸಲಾಗಿದೆ.
ಜೊತೆಗೆ ಎಐಸಿಸಿ ಕಾರ್ಯದರ್ಶಿ ಪಿ ಸಿ ವಿಷ್ಣುನಾಥನ್ ಅವರನ್ನೂ ತೆಲಂಗಾಣ ಉಸ್ತುವಾರಿಯಾಗಿ ನೇಮಿಸಲಾಗಿದೆ.
ADVERTISEMENT
ADVERTISEMENT