ನಟಿಯೊಬ್ಬರೊಂದಿಗೆ ಕಾಂಗ್ರೆಸ್ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆ ಆಗಿದ್ದಾರೆ ಎಂದು ಹೇಳಲಾಗಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಬಗ್ಗೆ ಹುನಗುಂದದ ಮಾಜಿ ಶಾಸಕರ ಬಳಿ ಮಾಧ್ಯಮಗಳು ಪ್ರಶ್ನೆ ಕೇಳಿವೆ.
ಇದು ನನಗೆ ಗೊತ್ತಿಲ್ಲ. ನನಗೆ ದಾಖಲೆ ಕೊಡಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ದಾರೆ. ದಾಖಲೆ ಕೊಟ್ರೆ ಮಾತಾಡ್ತೀನಿ. ನಾನು ಪ್ರತಿಕ್ರಿಯೆ ಕೊಡಲ್ಲ. ವೈಯಕ್ತಿಕ ಬದುಕಿಗೆ ಹೋಗಬಾರದು ಮತ್ತು ವೈಯಕ್ತಿಕ ಜೀವನವೇ ಬೇರೆ ರಾಜಕೀಯ ಜೀವನವೇ ಬೇರೆ. ವಿರೋಧಿಗಳು ಹೀಗೆ ಮಾಡುವುದು ಸಹಜ
ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಉತ್ತರಿಸಿದ್ದಾರೆ.
ADVERTISEMENT
ADVERTISEMENT