ಜಾರ್ಖಂಡ್ನ ಮಂದರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಶಿಲ್ಪಿ ನೇಹಾ ತಿರ್ಕೆ ಅವರು 10,678 ಮತಗಳಿಂದ ಪ್ರಚಂಡ ಜಯ ಗಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಶಿಲ್ಪಿ ಅವರ ತಂದೆ ಜಾರ್ಖಂಡ್ ವಿಕಾಸ್ ಮೋರ್ಚಾದಿಂದ ಗೆದ್ದಿದ್ದರು. ಆ ಬಳಿಕ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದರು. ಆದ್ರೆ ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದರಿಂದ ಅನರ್ಹಗೊಂಡಿದ್ದರಿAದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.
ಮಂದರ್ನಲ್ಲಿ ಬಿಜೆಪಿಗೆ ಬಂಡಾಯ ಅಭ್ಯರ್ಥಿಯೇ ದೊಡ್ಡ ಮುಳುವಾದರು. ಬಿಜೆಪಿ ಟಿಕೆಟ್ ಸಿಗದೇ ಸ್ಪರ್ಧಿಸಿದ್ದ ದಿಯೋ ಕುಮಾರ್ ಧನ್ 14, 802 ಮತಗಳನ್ನು ಪಡೆದು ಬಿಜೆಪಿಗೆ ದೊಡ್ಡ ನಷ್ಟ ಉಂಟು ಮಾಡಿದರು. ಧನ್ ಅವರಿಗೆ ಓವೈಸಿ ನೇತೃತ್ವದ ಎಂಐಎA ಬೆಂಬಲ ಸೂಚಿಸಿತ್ತು.
ಬಿಜೆಪಿ ಅಭ್ಯರ್ಥಿ ಗಂಗೋತ್ರಿ ಕುಜುರ್ 34, 158 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಎದುರು ಸೋತರು.
ಈ ಗೆಲುವಿನೊಂದಿಗೆ ಜಾರ್ಖಂಡ್ನಲ್ಲಿ ಕಾಂಗ್ರೆಸ್ಗೆ ಹೊಸ ಹುಮ್ಮಸ್ಸು ಸಿಕ್ಕಿದೆ.