ತಮಿಳುನಾಡಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮಿಳುನಾಡು ಕಾಂಗ್ರೆಸ್ ಘಟಕದ ಅಧ್ಯಕ್ಷ ಇ ವಿ ಕೆ ಎಸ್ ಇಳಂಗೋವನ್ ಅವರು 48 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದಾರೆ.
ಕಾಂಗ್ರೆಸ್+ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಇಳಂಗೋವನ್ ಕಣಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ನಿಂದ ಶಾಸಕರಾಗಿದ್ದ ಇಳಂಗೋವನ್ ಅವರ ಪುತ್ರನ ನಿಧನದ ಕಾರಣದಿಂದ ಉಪ ಚುನಾವಣೆ ನಡೆದಿದೆ.
ಬಿಜೆಪಿ ಬೆಂಬಲಿತ ಎಐಡಿಎಂಕೆ ಅಭ್ಯರ್ಥಿ ಕೆ ಎಸ್ ತೆನ್ನರಸು ಸೋತಿದ್ದಾರೆ. 2016ರಲ್ಲಿ ತೆನ್ನರಸು ಈ ಕ್ಷೇತ್ರದ ಶಾಸಕರಾಗಿ ಗೆದ್ದಿದ್ದರು.
ಉಪ ಚುನಾವಣೆ ಹೊತ್ತಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಎಡಪ್ಪಾಡಿ ಪಳನಿಸ್ವಾಮಿ ಮತ್ತು ಓ ಪನ್ನೀರ್ಸೆಲ್ವಂ ಬಣದ ನಡುವೆ ಸಂಧಾನ ಮಾಡಿಸಿ ಎಐಎಡಿಎಂಕೆಯಿಂದ ಸರ್ವಸಮ್ಮತ ಒಬ್ಬರೇ ಅಭ್ಯರ್ಥಿಯನ್ನು ಹಾಕಿಸಿದ್ದರು.
ಈರೋಡ್ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಐಎಡಿಎಂಕೆ ಅಭ್ಯರ್ಥಿಗೆ ಆದ ಹೀನಾಯ ಸೋಲು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರಿಗೂ ಮುಖಭಂಗ.
ಅಣ್ಣಾಮಲೈ ನೇತೃತ್ವದಲ್ಲಿ 2021ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದ್ದ ಬಿಜೆಪಿಗೆ ಮುಖಭಂಗವಾಗಿತ್ತು. ಈಗ ಉಪ ಚುನಾವಣೆಯಲ್ಲೂ ಸೋಲು ಮುಂದುವರಿದಿದೆ.
ಅಣ್ಣಾಮಲೈ ಅವರನ್ನು ಬಿಜೆಪಿ ಕರ್ನಾಟಕ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಿಸಿದೆ.
ADVERTISEMENT
ADVERTISEMENT