ವಿವಾದಾತ್ಮಕ ಹೇಳಿಕೆಗಳು ಮತ್ತು ಟ್ವೀಟ್ ಗಳಿಂದ ಸುದ್ದಿಯಾಗುತ್ತಲೇ ಇರುವ ಬಹುಭಾಷಾ ನಿರ್ದೇಶಕ ಮತ್ತು ನಿರ್ಮಾಪಕ ರಾಮ್ ಗೋಪಾಲ್ ವರ್ಮ ಅವರು ಇದೀಗ ದ್ರೌಪದಿ ವಿಚಾರದಲ್ಲಿ ವಿವಾದಕ್ಕೀಡಾಗಿದ್ದಾರೆ. ಎನ್ ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಗ್ಗೆ ರಾಮ್ ಗೋಪಾಲ ವರ್ವಾ ಅವರು ಮಾಡಿರುವ ಟ್ವೀಟ್ ವಿವಾದಕ್ಕೀಡಾಗಿದೆ. ಈ ಬಗ್ಗೆ ಇವರ ಮೇಲೆ ಪ್ರಕರಣವೂ ದಾಖಲಾಗಿದೆ.
ನಿರ್ದೇಶಕ ರಾಮ್ಗೋಪಾಲ್ ವರ್ಮಾ ಟ್ವೀಟ್ ಮಾಡಿ, ದ್ರೌಪದಿಯವರು ರಾಷ್ಟ್ರಪತಿಯಾದರೆ ಪಾಂಡವರು ಮತ್ತು ಕೌರವರು ಯಾರು ಎಂದು ಪ್ರಶ್ನಿಸಿದ್ದರು.
ಈ ಟ್ವೀಟ್ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ ನಂದೇಶ್ವರ್ ಗೌಡ ಅವರು ವರ್ಮಾ ಅವರ ಈ ಟ್ವೀಟ್ ಉಲ್ಲೇಖಿಸಿ ವರ್ಮಾ ಅವರ ವಿರುದ್ಧ ಹೈದರಾಬಾದ್ ನ ಅಬಿಡ್ಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
This was said just in an earnest irony and not intended in any other way ..Draupadi in Mahabharata is my faviourate character but Since the name is such a rarity I just remembered the associated characters and hence my expression. Not at all intended to hurt sentiments of anyone https://t.co/q9EZ5TcIIV
— Ram Gopal Varma (@RGVzoomin) June 24, 2022
ತಮ್ಮ ಟ್ವೀಟ್ ವಿವಾದಾತ್ಮಕವಾಗಿ ಬದಲಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ರಾಮ್ ಗೋಪಾಲ್ ವರ್ಮ, ಇದನ್ನು ನಾನು ಕೇವಲ ವ್ಯಂಗ್ಯವಾಗಿ ಹೇಳಿದೆಯಷ್ಟೆ, ಅದು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಮಹಾಭಾರತದಲ್ಲಿ ದ್ರೌಪದಿ ನನ್ನ ಅಚ್ಚುಮೆಚ್ಚಿನ ಪಾತ್ರವಾಗಿದ್ದು, ಈಗ ರಾಷ್ಟ್ರಪತಿ ಅಭ್ಯರ್ಥಿಯಾಗಿರುವವರ ಹೆಸರು ಅಪರೂಪದ್ದಾಗಿರುವುದರಿಂದ ಅವರ ಹೆಸರನ್ನು ಮಹಾಭಾರತದ ದ್ರೌಪದಿ ಪಾತ್ರಕ್ಕೆ ಹೋಲಿಸಿ ಟ್ವೀಟ್ ಮಾಡಿದೆ ಅಷ್ಟೆ, ಅದು ಬಿಟ್ಟರೆ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ ಎಂದಿದ್ದಾರೆ.