ಪ್ರವಾದಿ ಮೊಹಮ್ಮದರ ( Prophet Mohamad ) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಶಾಸಕ ಟಿ ರಾಜಾಸಿಂಗ್ (BJP MLA T Rajasingh) ಅವರಿಗೆ ಬಿಜೆಪಿ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದೆ.
ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್ (Hyderbad) ಪೊಲೀಸರು ಶಾಸಕ ರಾಜಾಸಿಂಗ್ ಅವರನ್ನು ಇಂದು ಬೆಳಿಗ್ಗೆಯಷ್ಟೇ ಬಂಧಿಸಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ನಿಮ್ಮನ್ನು ಯಾಕೆ ಪಕ್ಷದಿಂದ ಉಚ್ಚಾಟನೆ ಮಾಡಬಾರದು ಎಂದು ಕಾರಣ ಕೇಳಿ ಶೋಖಾಸ್ ನೋಟಿಸ್ ಜಾರಿ ಮಾಡಿದೆ. ಈ ನೋಟಿಎಸ್ಗೆ ಶಾಕ ಟಿ ರಾಜಾಸಿಂಗ್ 10 ದಿನಗಳ ಒಳಗಾಗಿ ಉತ್ತರಿಸಬೇಕಿದೆ.
ಇದನ್ನೂ ಓದಿ : ಪ್ರವಾದಿ ಮಹಮ್ಮದರ ಅವಹೇಳನ – ಬಿಜೆಪಿ ಶಾಸಕ ಟೈಗರ್ ರಾಜಾಸಿಂಗ್ ಬಂಧನ
ಪ್ರವಾದಿ ಮೊಹಮ್ಮದರ ( Prophet Mohamad ) ಬಗ್ಗೆ ರಾಜಾಸಿಂಗ್ ಮಾಡಿದ್ದ ಅವಹೇಳನಕಾರಿ ಭಾಷಣದ ವೀಡಿಯೋ ಬಹಿರಂಗ ಆದ ಬಳಿಕ ಹೈದ್ರಾಬಾದ್ ಪೊಲೀಸ್ ಆಯುಕ್ತರ ಕಚೇರಿ ಎದುರು ಮುಸಲ್ಮಾನ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದರು.
ರಾಜಾಸಿಂಗ್ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ. ಪ್ರಚೋದನಕಾರಿ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ವಿವಾದಿತ ರಾಜಕಾರಣಿ.