ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಚೇರಿ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘ ಭ್ರಷ್ಟಾಚಾರದ ಆರೋಪ ಮಾಡಿದೆ. `ಟೆಂಡರ್ ಅನುಮೋದನೆಗೆ ಸಿಎಂಗೂ ಶೇಕಡಾ 5ರಷ್ಟು ಕಮಿಷನ್ ಕೊಡ್ಬೇಕು ಎಂದು ಅಧಿಕಾರಿಗಳು ಹೇಳ್ತಾರೆ’ ಎಂದು ಬೆಂಗಳೂರಲ್ಲಿ ಗುತ್ತಿಗೆದಾರರ ಸಂಘ ಆರೋಪಿಸಿದೆ.
`ಮುಖ್ಯಮಂತ್ರಿ ಕಚೇರಿಯಲ್ಲೂ ಭ್ರಷ್ಟಾಚಾರ ಇದೆ. ಮೈಸೂರಿನ ಮೂಡಾದಲ್ಲಿ ಟೆಂಡರ್ವೊAದಕ್ಕೆ ಶೇಕಡಾ 12ರಷ್ಟು ಕಮಿಷನ್ ನೀಡಲಾಗಿದೆ. ಅದೂ ನೇರವಾಗಿ ಮಂತ್ರಿಗೇ ಕೊಡಲಾಗಿದೆ ಎಂಬ ಮಾಹಿತಿ ಇದೆ. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಭ್ರಷ್ಟಾಚಾರ ಜಾಸ್ತಿ ಇದೆ’
`ನೀರಾವರಿ ಇಲಾಖೆಯಲ್ಲಿ ಹೇಳಕ್ಕಾಗದಷ್ಟು ಭ್ರಷ್ಟಾಚಾರ ಇದೆ. ನೀರಾವರಿ ಇಲಾಖೆಯಲ್ಲಿ ಸಚಿವರು ಏಜೆಂಟ್ಗಳನ್ನೇ ಫಿಕ್ಸ್ ಮಾಡಿದ್ದಾರೆ. ಪಾಟೀಲ್ ಎಂಬ ಏಜೆಂಟ್ನ್ನೇ ಫಿಕ್ಸ್ ಮಾಡಿದ್ದಾರೆ. ಮುಖ್ಯಮಂತ್ರಿ ಕಚೇರಿಯಲ್ಲಿ ಭ್ರಷ್ಟಾಚಾರ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶೇಕಡಾ 15ರಷ್ಟು ಕಮಿಷನ್ ನಡೀತಿದೆ.
`ನಮ್ಮ ಬಳಿ ಸಾಕಷ್ಟು ದಾಖಲೆಗಳು ಇವೆ. ನಮ್ಮ ವಕೀಲರ ಜೊತೆಗೂ ಚರ್ಚಿಸಿದ್ದೀವಿ. ಬರೀ ಕ್ಯಾಶ್ನಲ್ಲೇ ಹೋಗಿದೆ. ಚೆಕ್ನಲ್ಲಿ ತೆಗೆದುಕೊಂಡವರೂ ಇದ್ದಾರೆ.’
`ಸಚಿವರಿಂದ ನಮಗೆ ಪ್ರಾಣ ಬೆದರಿಕೆ ಇದ್ದು, ಸಂತೋಷ್ ಪಾಟೀಲ್ಗೆ ಆದ ಗತಿಯೇ ನಮಗೆ ಆಗುತ್ತದೆ ಎಂಬ ಭಯ ಇದೆ. 15 ದಿವಸದೊಳಗೆ ಖಂಡಿತಾ ದಾಖಲೆಗಳನ್ನು ಬಿಡುಗಡೆ ಮಾಡ್ತೀವಿ’ ಎಂದು ರಾಜ್ಯ ಗುತ್ತಿಗೆದಾರರ ಸಂಘ ಹೇಳಿದೆ.