ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಆರ್. ಚಂದ್ರು ತಾವು ಪಡೆದ 85 ಲಕ್ಷ ರೂಪಾಯಿ ಸಾಲ ಮರಪಾವತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸಂಕಷ್ಟ ಎದುರಾಗಿದೆ.
2019ರಲ್ಲಿ ನಿರ್ದೇಶಕ ಆರ್. ಚಂದ್ರು, ಬಸವರಾಜು ಎಂಬುವರಿಂದ 85 ಲಕ್ಷ ರೂಪಾಯಿ ಪಡೆದಿದ್ದು ಅದನ್ನು ಮರುಪಾವತಿ ಮಾಡಿಲ್ಲ ಅಂತ ಬಸವರಾಜು ಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣ ಕುರಿತಾಗಿ ನ್ಯಾಯಾಲಯದ ಸೂಚನೆ ಮೇರೆಗೆ ಆರ್ ಚಂದ್ರು 55 ಲಕ್ಷ ರೂಪಾಯಿ ಬ್ಯಾಂಕ್ ಗ್ಯಾರಂಟಿಯನ್ನು ದೂರುದಾರ ಬಸವರಾಜ್ ಗೆ ನೀಡಿದ್ದರು. ಸದ್ಯ ಚಂದ್ರು ನೀಡಿದ್ದ ಗ್ಯಾರಂಟಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮತ್ತೆ ಬ್ಯಾಂಕ್ ಗ್ಯಾರಂಟಿ ನೀಡುವಂತೆ 23ನೇ ಸಿಸಿಎಚ್ ನ್ಯಾಯಾಲಯ ಸೂಚನೆ ನೀಡಿದೆ. ಈ ಪ್ರಕರಣವನ್ನು ಜೂನ್ 01ಕ್ಕೆ ಮುಂದಡಲಾಗಿದೆ.