ಇದೇ ವರ್ಷದ ಡಿಸೆಂಬರ್ನಲ್ಲಿ ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ಗುಜರಾತ್ ಕಾಂಗ್ರೆಸ್ನಲ್ಲೇ ಅಸಮಾಧಾನದ ಹೊಗೆಯಾಡಿದೆ. ತನ್ನನ್ನು ಕಾಂಗ್ರೆಸ್ನ ಯಾವ ಸಭೆಗೂ ಆಹ್ವಾನಿಸಲಾಗುತ್ತಿಲ್ಲ ಎಂದು ಗುಜರಾತ್ ಕಾಂಗ್ರೆಸ್ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಬಹಿರಂಗ ಅಸಮಾಧಾನ ತೋಡಿಕೊಂಡಿದ್ದಾರೆ.
ಹೊಸದಾಗಿ ಮದುವೆ ಆಗಿರುವ ಗಂಡಿಗೆ ಸಂತಾನಹರಣ ಚಿಕಿತ್ಸೆ ಮಾಡಿದಂತೆ ನನ್ನ ಸ್ಥಿತಿ ಆಗಿದೆ ಎಂದಿರುವ ಹಾರ್ದಿಕ್ ಪಟೇಲ್. ನನ್ನನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಸಭೆ ಆಹ್ವಾನಿಸುತ್ತಿಲ್ಲ, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ನನ್ನ ಜೊತೆ ಸಮಾಲೋಚಿಸುತ್ತಿಲ್ಲ. ಇತ್ತೀಚೆಗೆ 75 ಹೊಸ ಪ್ರಧಾನ ಕಾರ್ಯದರ್ಶಿಗಳು ಮತ್ತು 25 ಉಪಾಧ್ಯಕ್ಷರನ್ನು ಘೋಷಿಸಿದ್ದಾರೆ. ಅವರು ನನ್ನೊಂದಿಗೆ ಸಲಾಲೋಚಿಸಿದ್ದಾರಾ..? ಆ ಪಟ್ಟಿಯಲ್ಲಿ ಯಾವುದಾದರೂ ಬಲಿಷ್ಠ ನಾಯಕರ ಹೆಸರು ಬಿಟ್ಟು ಹೋಗಿದೆ ಎಂದು ಭಾವಿಸಿದ್ದಾರಾ..? ಹಾಗಿದ್ದ ಮೇಲೆ ಈ ಹುದ್ದೆ (ಕಾರ್ಯಾಧ್ಯಕ್ಷ) ಹುದ್ದೆಯ ಅರ್ಥ ಏನು..?
ಎಂದು ಹೈಕಮಾಂಡ್ ವಿರುದ್ಧ ಗರಂ ಆಗಿದ್ದಾರೆ.
ಪಟೇಲ್ ಸಮುದಾಯದ ಪ್ರಭಾವಿ ನಾಯಕ ನರೇಶ್ ಪಟೇಲ್ ಬಗ್ಗೆ ಕಾಂಗ್ರೆಸ್ ವಿಳಂಬ ನಿರ್ಧಾರ ಕೈಗೊಳ್ಳುತ್ತಿದ್ದು, ಇದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ ಎಂದೂ ಹಾರ್ದಿಕ್ ಪಟೇಲ್ ಕಿಡಿಕಾರಿದ್ದಾರೆ.