ADVERTISEMENT
ಮಹಾರಾಷ್ಟ್ರದಲ್ಲಿ ಕ್ರೇನ್ ಉರುಳಿಬಿದ್ದು 16 ಮಂದಿ ಸಾವನ್ನಪ್ಪಿದ್ದಾರೆ. ಥಾಣೆಯಲ್ಲಿ ಸಮೃದ್ಧಿ ಎಕ್ಸ್ಪ್ರೆಸ್ ವೇಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ದುರಂತ ಸಂಭವಿಸಿದೆ.
ಮುಂಬೈಯಿಂದ 81 ಕಿಲೋ ಮೀಟರ್ ದೂರದಲ್ಲಿರುವ ಸರ್ಲಂಬೆ ಗ್ರಾಮದಲ್ಲಿ ಮಧ್ಯರಾತ್ರಿ 12 ಗಂಟೆ ವೇಳೆ ದುರಂತ ಸಂಭವಿಸಿದೆ.
ಅವಶೇಷಗಳಡಿ ಇನ್ನೂ ಆರು ಮಂದಿ ಸಿಲುಕಿರುವ ಮಾಹಿತಿ ಇದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕದಳ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ADVERTISEMENT