ಹೈ ಪ್ರೊಫೈಲ್ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಆರ್ಯನ್ ಖಾನ್ಗೆ ‘ಕ್ಲೀನ್ ಚಿಟ್’ ನೀಡಿದೆ.
ಕಳೆದ ವರ್ಷ ಮುಂಬೈ ಬಂದರಿನಲ್ಲಿ ಕ್ರೋಸ್ ಹಡಗಿನ ಮೇಲೆ ಅಧಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಅನಂತರ ಆ ಸ್ಥಳದಲ್ಲಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇತರರನ್ನು ಅಧಿಕಾರಿಗಳು ಬಂಧಿಸಿದ್ದರು.
ಅನಂತರ ಅರ್ಯನ್ ಖಾನ್ ಗೆ ಜಾಮೀನು ದೊರಕಿತ್ತು.
ಪ್ರಕರಣದಲ್ಲಿ 14 ಮಂದಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರು ಮಂದಿ ವಿರುದ್ಧ ದೂರು ದಾಖಲಾಗಿಲ್ಲ.
ಚಾರ್ಜ್ಶೀಟ್ ಸಲ್ಲಿಸಲು ನ್ಯಾಯಾಲಯವು ಎನ್ಸಿಬಿಗೆ 60 ದಿನಗಳ ಕಾಲಾವಕಾಶವನ್ನು ವಿಸ್ತರನೆ ಮಾಡಿತ್ತು. ಮೇ 29 ರಂದು ಕೊನೆಯ ದಿನಾಂಕವಗಿತ್ತು. ಇಂದು ಎನ್ಸಿಬಿ ತನ್ನ ಅಂತಿಮ ಆರೋಪಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಈ ಆರೋಪ ಪಟ್ಟಿಯಲ್ಲಿ ಆರ್ಯನ್ ಬಳಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.