ಅಸಾನಿ ಚಂಡಮಾರುತ ತನ್ನ ದಿಕ್ಕು ಬದಲಿಸಿದೆ. ವಿಶಾಖಪಟ್ಟಣ ಕರಾವಳಿ ಮೂಲಕ ಸಾಗಿ ದುರ್ಬಲಗೊಳ್ಳಬಹುದು ಅಂದಾಜಿಸಲಾಗಿದ್ದ ಚಂಡಮಾರುತ ಆಂಧ್ರದ ಕಾಕಿನಾಡ ಕರಾವಳಿ ಅಪ್ಪಳಿಸಿದೆ.
ಚಂಡಮಾರುತದ ಕಾರಣದಿಂದ ಕಾಕಿನಾಡ ಮತ್ತು ವಿಶಾಖಪಟ್ಟಣದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬಿರುಗಾಳಿ ಸಹಿತ ರಣಭೀಕರ ಮಳೆ ಆಗುತ್ತಿದೆ. ಕಾಕಿನಾಡ ಕರಾವಳಿ ಪ್ರವೇಶಿಸಿದ ಬಳಿಕ ಮತ್ತೆ ಚಂಡಮಾರುತ ಕಾಕಿನಾಡ-ವಿಶಾಖಪಟ್ಟಣ ಮೂಲಕ ತಿರುಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
48 ಗಂಟೆಗಳವರೆಗೆ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆ ನೀಡಲಾಗಿದೆ.