ಟಾಟಾ ಸನ್ಸ್ ಕಂಪನಿಗಳ ಮಾಜಿ ಮುಖ್ಯಸ್ಥರಾಗಿದ್ದ ಸೈರಸ್ ಮಿಸ್ತ್ರಿ (Cyrus Mistry) ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮುಂಬೈನಲ್ಲಿ ಘಟಿಸಿದ ಅಪಘಾತದಲ್ಲಿ ಉದ್ಯಮಿ ಸೈರಸ್ ಮಿಸ್ತ್ರಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಇವರು ಅಹಮದಾಬಾದ್ನಿಂದ ಮುಂಬೈಗೆ ಹೋಗುತ್ತಿದ್ದರು.
54 ವರ್ಷದ ಇವರು 2012ರಿಂದ 2016ರವರೆಗೆ ಟಾಟಾ ಸನ್ಸ್ ಮುಖ್ಯಸ್ಥರಾಗಿದ್ದರು. ಆ ಬಳಿಕ ವಿವಾದದ ಕಾರಣದಿಂದ ಇವರನ್ನು ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಮಿಸ್ತ್ರಿ ಅವರು ತಮ್ಮ ಕುಟುಂಬದ ಕಂಪನಿ ಶಾಪೂರ್ಜಿ ಪಲ್ಲೋನ್ಜಿ ಕಂಪನಿಯ ಮುಖ್ಯಸ್ಥರು. ಕಟ್ಟಡ ನಿರ್ಮಾಣ, ಜವಳಿ, ಗೃಹೋಪಯೋಗಿ ಉಪಕರಣದಿಂದ 9ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಮುಖ ಕಂಪನಿ ಆಗಿದೆ. ಈ ಕಂಪನಿಯ ಮೌಲ್ಯ 2.5 ಬಿಲಿಯನ್ ಅಮೆರಿಕನ್ ಡಾಲರ್.
ADVERTISEMENT
ADVERTISEMENT