ಮಧ್ಯಪ್ರದೇಶದ ಕುನ್ಹೋ ನ್ಯಾಷನಲ್ ಪಾರ್ಕ್ ನಲ್ಲಿ ಮತ್ತೊಂದು ಹೆಣ್ಣು ಚೀತಾ ಸಾವನ್ನಪ್ಪಿದೆ. ಕಳೆದ ಮಾರ್ಚ್ ತಿಂಗಳಿಂದ ಈ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ ಮೂರಕ್ಕೇರಿದೆ.
ಮಂಗಳವಾರ ಬೆಳಗ್ಗೆ ಹೆಣ್ಣು ಚೀತಾ ದಕ್ಷ ತೀವ್ರ ಗಾಯಗಳೊಂದಿಗೆ ನರಳುತ್ತಾ ಇದ್ದಿದ್ದನ್ನು ಅರಣ್ಯ ಸಿಬ್ಬಂದಿ ಗಮನಿಸಿದರು.
ಪಶುವೈದ್ಯರು ಚಿಕಿತ್ಸೆ ನೀಡಿದರೂ, ಮಧ್ಯಾಹ್ನಕ್ಕೆಲ್ಲಾ ದಕ್ಷ ಚೀತಾ ಸಾವನ್ನಪ್ಪಿತು ಎಂದು ಅಧಿಕಾರಿಗಳು ಪ್ರಕಟಿಸಿದರು.
ಎರಡು ಗಂಡು ಚೀತಾಗಳು ನೀಡಿದ ಲೈಂಗಿಕ ಹಿಂಸೆಯ ಕಾರಣ ದಕ್ಷಿ ಚೀತಾ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಚೀತಾಗಳ ಸಂತತಿಯನ್ನು ಭಾರತದಲ್ಲಿ ವೃದ್ಧಿ ಮಾಡಿಸುವ ಪ್ರಯತ್ನದ ಭಾಗವಾಗಿ ಚೀತಾಗಳನ್ನು ಕಳೆದ ವರ್ಷ ದಕ್ಷಿಣ ಆಫ್ರಿಕಾದಿಂದ ತರಲಾಗಿತ್ತು.
ಮಂಗಳವಾರ ಮರಣಿಸಿದ ಹೆಣ್ಣು ಚಿರತೆ ಹೆಸರು ದಕ್ಷ.. ಅಗ್ನಿ ಮತ್ತು ವಾಯು ಎಂಬ ಗಂಡು ಚೀತಾಗಳ ಪಕ್ಕದಲ್ಲಿಯೇ ದಕ್ಷಾಳನ್ನು ಇರಿಸಲಾಗಿತ್ತು.
ದಕ್ಷಿಣ ಆಫ್ರಿಕಾ-ಭಾರತದ ವನ್ಯಜೀವಿ ಅಧಿಕಾರಿಗಳು, ನಿಪುಣರು ಏಪ್ರಿಲ್ 30ರಷ್ಟು ಸಭೆ ಸೇರಿದ್ದರು.
ದಕ್ಷ ಚೀತಾ ಜೊತೆ ಎರಡು ಗಂಡು ಚಿರತೆಗಳನ್ನು ಇರಿಸಲು ನಿರ್ಧರಿಸಿದ್ದರು. ಒಂದು ದಿನದ ತರುವಾಯ ಅವುಗಳ ಎನ್ ಕ್ಲೋಸರ್ ಗಳ ನಡುವಿನ ಗೇಟ್ ತೆರೆದಿದ್ದರು.
ಲೈಂಗಿಕ ವಾಂಛೆಗಳನ್ನು ತೀರಿಸಿಕೊಳ್ಳುವ ಸಂದರ್ಭದಲ್ಲಿ ಗಂಡು ಚೀತಾಗಳು ಸಾಮಾನ್ಯವಾಗಿ ಹೆಣ್ಣು ಚೀತಾಗಳ ಜೊತೆ ಹಿಂಸಾತ್ಮಕವಾಗಿ ವರ್ತನೆ ಮಾಡುತ್ತವೆ. ಅಂತಹ ಸಂದರ್ಭದಲ್ಲಿ ಸಿಬ್ಬಂದಿ ಮಧ್ಯಪ್ರವೇಶ ಮಾಡುವುದು ಅಸಾಧ್ಯ ಎಂಬುದು ಪರಿಣಿತರ ಮಾತು.