ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಏನೆಕಲ್ ಭಾಗದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರ ಸಮೀಪದ ಸಂತಡ್ಕ ಎಂಬಲ್ಲಿ ಭಾರೀ ಮಳೆಗೆ ಸೇತುವೆಯೊಂದು ಕೊಚ್ಚಿ ಹೋಗಿದೆ. ಭಾರೀ ನೆರೆ ನೀರಿನೊಂದಿಗೆ ಮರದ ದಿಮ್ಮಿ ಬಂದು ಸೇತುವೆ ಮುರಿದು ಬಿದ್ದಿದೆ. ಸೇತುವೆ ಮುರಿದ ಪರಿಣಾಮ 200ಕ್ಕೂ ಹೆಚ್ಚು ಕುಟುಂಬ ಸಂಪರ್ಕ ಕಳೆದುಕೊಂಡಿವೆ. 2018ರಲ್ಲಿ ಸುರಿದ ಭಾರಿ ಮಳೆಗೆ ಸೇತುವೆ ಹಾನಿಗೊಳಗಾಗಿತ್ತು. ಬಳಿಕ ತೇಪೆ ಹಚ್ಚಿ ದುರಸ್ಥಿಗೊಳಿಸಲಾಗಿತ್ತು.
ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಸುಬ್ರಹ್ಮಣ್ಯದಲ್ಲೇ ಮೊಕ್ಕಾಂ ಹೂಡಿದ್ದು, ನೆರೆ ಪರಿಸ್ಥಿತಿ ನಿಯಂತ್ರಿಸಲು ಎಸಿ, ತಹಶೀಲ್ದಾರ್ ಜೊತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎನ್ಡಿಆರ್ಎಫ್ ತಂಡ ಸುಬ್ರಹ್ಮಣ್ಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಳ್ಯದ ಕೊಲ್ಲಮೊಗರು ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಡಿಆರ್ಎಫ್ ತಂಡ ಕಾರ್ಯಚರಿಸುತ್ತಿದೆ.