ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನೂತನ ಚಿತ್ರದ ಹೆಸರು ಹಾಗೂ ನೂತನ ಪೋಸ್ಟರ್ ಇಂದು ಶುಕ್ರವಾರ ಬಿಡುಗಡೆಯಾಗಿದೆ.
ಇಂದು ‘ಕದನ ವಿರಾಮ’ ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ನಲ್ಲಿ ಸಮುದ್ರದ ಮಧ್ಯೆ ಬೆಂಕಿ ಹೊತ್ತಿಕೊಂಡಿರುವ ಹಡಗಿನ ಹಿಂದೆ ಕೋಪಗ್ರಸ್ಥನಾದ ದರ್ಶನ್ ಅವರನ್ನು ತೋರಿಸಲಾಗಿದೆ. ಆ ಮೂಲಕ ಒಂದು ವಿಶೇಷ ಕಥೆಯನ್ನಾಧರಿಸಿ ದುನಿಯಾ ಸೂರಿ ಹಾಗೂ ನಟ ದರ್ಶನ್ ಕಾಂಬಿನೇಷನ್ನ ತಂಡ ಚಿತ್ರ ನಿರ್ಮಾಣಕ್ಕಿಳಿಯಲಿದೆ ಎಂಬುದನ್ನು ಪೋಸ್ಟರ್ನಲ್ಲಿಯೇ ಗಮನಿಸಬಹುದು.
BOOM 🔥😉#ಕದನವಿರಾಮ shoot's start from August 2023🥂❤️#DBoss #Duniyasoori#KadanaVirama@dasadarshan @Duniyasoori @Dcompany171 @DBossTrends pic.twitter.com/ls4bvtHvO0
— 𝐏𝐫𝐢𝐧𝐜𝐞 𝐒𝐚𝐜𝐡𝐢𝐧 ♛ | ᴅᴇᴠɪʟ (@PrinceSachhi) June 24, 2022
ಕದನ ವಿರಾಮ ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಲಿದ್ದಾರೆ. ನಾಯಕನಟನಾಗಿ ದರ್ಶನ್ ಪಾತ್ರ ನಿರ್ವಹಿಸಲಿದ್ದಾರೆ. ಇದರ ಹೊರತಾಗಿ ಇನ್ನು ಚಿತ್ರತಂಡದ ಮಾಹಿತಿ ಹಾಗೂ ಇತರೆ ಪಾತ್ರವರ್ಗದ ಬಗ್ಗೆ ತಿಳಿದುಬಂದಿಲ್ಲ.
ಈ ಚಿತ್ರ 2023 ರ ಅಗಸ್ಟ್ನಲ್ಲಿ ಸೆಟ್ಟೇರಲಿದೆ ಎಂದು ದುನಿಯಾ ಸೂರಿ ಹೇಳಿದ್ದಾರೆ.
ಪ್ರಸ್ತುತ ನಟ ದರ್ಶನ್ ಕ್ರಾಂತಿ ಸಿನೆಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ಕ್ರಾಂತಿ ಸಿನೆಮಾವನ್ನು ಅಕ್ಟೋಬರ್ 14 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.