ಒಂಟಿ ಸಲಗದ ದಾಳಿಗೆ ದಸರಾ ಅಂಬಾರಿ ಹೊರುತ್ತಿದ್ದ 64 ವರ್ಷದ ಅರ್ಜುನ ಆನೆ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಳಸೂರಲ್ಲಿ ಕಾಡಾನೆಯನ್ನು ಸೆರೆಹಿಡಿಯುವ ವೇಳೆ ಒಂಟಿ ಸಲಗ ನಡೆಸಿದ ದಾಳಿಯಲ್ಲಿ ಅರ್ಜುನ ಆನೆ ಪ್ರಾಣ ಬಿಟ್ಟಿದೆ.
ಒಂಟಿ ಸಲಗವನ್ನು ಸೆರೆಹಿಡಿಯುವ ಅರಿವಳಿಕೆ ಚುಚ್ಚುಮದ್ದು ನೀಡುವ ವೇಳೆ ಆ ಆನೆ ದಾಳಿ ಮಾಡಿದೆ. ಆ ಅರ್ಜುನ ಆನೆ ಜೊತೆಗಿದ್ದ ಇತರೆ ಮೂರು ಸಾಕಾನೆಗಳು ಓಡಿಹೋದವು. ಆನೆಗಳ ಮೇಲೆ ಕೂತಿದ್ದ ಮಾವುತರೂ ಕೂಡಾ ಓಡಿಹೋದರು.
ಆದರೆ ಒಂಟಿ ಸಲಗದ ಜೊತೆಗೆ ಹೋರಾಡಿ ಅರ್ಜುನ ಆನೆ ಪ್ರಾಣಬಿಟ್ಟಿದೆ.22 ವರ್ಷ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅರ್ಜುನ 8 ಬಾರಿ ಅಂಬಾರಿ ಹೊತ್ತು ಸಾಗಿದ್ದ.1968ರಲ್ಲಿ ಹೆಚ್ ಡಿ ಕೋಟೆ ತಾಲೂಕಿನ ಕಾಕನಕೋಟೆಯಲ್ಲಿ ಅರ್ಜುನಾ ಆನೆಯನ್ನು ಸೆರೆಹಿಡಿಯಲಾಗಿತ್ತು.