ADVERTISEMENT
18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24ರಿಂದ ಆರಂಭವಾಗಲಿದೆ. ಜೂನ್ 24ರಿಂದ ಜುಲೈ 3ರವರೆಗೆ ಹೊಸದಾಗಿ ಆಯ್ಕೆಯಾಗಿರುವ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಸಭೆಗೆ ಹೊಸ ಸ್ಪೀಕರ್ ಅವರ ಆಯ್ಕೆ ನಡೆಯಲಿದೆ ಮತ್ತು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಜಂಟಿ ಅಧಿವೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ.
ರಾಜ್ಯಸಭೆಯ 264ನೇ ಅಧಿವೇಶನ ಜೂನ್ 27ರಂದು ಆರಂಭವಾಗಲಿದ್ದು, ಜುಲೈ 3ರಂದು ಅಂತ್ಯವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜ್ಜು ಹೇಳಿದ್ದಾರೆ.
ADVERTISEMENT