ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಕ್ರಮವಾಗಿ 65 ಮತ್ತು 67ಕ್ಕೆ ಹೆಚ್ಚಳ ಮಾಡಬೇಕೆಂದು ಬಿಸಿಐ (ಬಾರ್ ಕೌನ್ಸಿಲ್ ಆಫ್ ಇಂಡಿಯಾ-ವಕೀಲರ ಸಂಘ) ಶಿಫಾರಸು ಮಾಡಿದೆ.
ಈ ರೀತಿ ಬದಲಾವಣೆ ಮಾಡಿದರೆ ಅತ್ಯಂತ ಅನುಭವಿ, ತಜ್ಞ, ಹಿರಿಯ ವಕೀಲರಿಗೆ ವಿವಿಧ ಆಯೋಗಗಳಲ್ಲಿ, ಮಂಡಳಿಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಇದರ ಹಿಂದಿನ ಉದ್ದೇಶ.
ಬಿಸಿಐ ಅಧೀನದಲ್ಲಿ ಬರುವ ರಾಜ್ಯ ಬಾರ್ ಕೌನ್ಸಿಲ್ಗಳು, ಹೈಕೋರ್ಟ್ ಬಾರ್ ಮಂಡಳಿ ಸಭೆ ಕಳೆದ ವಾರ ನಡೆದಿದೆ. ಇದರಲ್ಲಿ ವಿಷಯವನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬರಲಾಗಿದೆ.