ದೀಪಕ್ ಚಹಾರ್ ಗೆ ಬೆನ್ನಿಗೆ ಗಾಯವಾಗಿದ್ದು, ಐಪಿಎಲ್-15 ರಲ್ಲಿ ಆಡುವುದು ಅನುಮಾನವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆತಂಕ ಉಂಟಾಗಿದೆ.
ದೀಪಕ್ ಚಹಾರ್ ಚೆನ್ನೈ ತಂಡದ ಪ್ರಮುಖ ಬೌಲರ್ ಆಗಿದ್ದು ಹಾಲಿ ಚಾಂಪಿಯನ್ ಗಳು ಈಗಿನ ನಾಲ್ಕು ಪಂದ್ಯಗಳನ್ನೂ ಸೋತಿದ್ದು ಪಾಯಿಂಟ್ ಟೇಬಲ್ ನಲ್ಲಿ ಕುಸಿದಿದೆ.
ದೀಪಕ್ ಚಹಾರ್ ಅವರು ಏಪ್ರಿಲ್ 2 ನೇ ವಾರದಲ್ಲಿ ತಂಡಕ್ಕೆ ಮರಳುವ ನಿರೀಕ್ಷೆಯನ್ನು ತಂಡ ಹೊಂದಿತ್ತಾದರೂ, ಗಾಯದ ತೀವ್ರತೆಯಿಂದ ಚಹಾರ್ ಇಡೀ ಟೂರ್ನಮೆಂಟ್ ನಲ್ಲಿ ಆಡುವ ಸಾಧ್ಯತೆಗಳು ಕ್ಷೀಣಿಸಿವೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ದೀಪಕ್ ಚಹಾರ್ ಬೆನ್ನಿಗೆ ಗಾಯವಾಗಿತ್ತು.
ಫೆಬ್ರವರಿ ತಿಂಗಳಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟಿ20 ಪಂದ್ಯದಲ್ಲಿ ದೀಪಕ್ ಚಹಾರ್ ಗೆ ಕ್ವಾಡ್ರೈಸ್ಪ್ಸ್ ಟಿಯರ್ ಆಗಿತ್ತು. ಕಳೆದ ಒಂದು ತಿಂಗಳಿನಿಂದ ದೀಪಕ್ ಎನ್ ಸಿಎಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಪ್ರಾರಂಭದಲ್ಲಿ ಚಹಾರ್ ಐಪಿಎಲ್ ನ ಪ್ರಮುಖ ಭಾಗಕ್ಕೆ ಅಲಭ್ಯರಾಗಲಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ಸಿಎಸ್ ಕೆ ದೀಪಕ್ ಅವರ ತ್ವರಿತ ಚೇತರಿಕೆಯ ನಿರೀಕ್ಷೆಯಲ್ಲಿತ್ತು. ದೀಪಕ್ ಚಹಾರ್ ನ್ನು 14 ಕೋಟಿ ರೂಪಾಯಿಗಳಿಗೆ ಸಿಎಸ್ ಕೆ ತಂಡಕ್ಕೆ ಪಡೆದಿದೆ.
ಇನ್ನು, ಇಂದು ಚೆನ್ನೈ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
https://youtu.be/hm_RqQg_qUg