ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆಸಿ ಜೈಲಿಗೆ ಹೋಗಿದ್ದ ಬಿಜೆಪಿ ಯುವ ಘಟಕದ ಜಾಮೀನು ಮೂಲಕ ಹೊರಬಂದಿದ್ದಾರೆ.ಜೈಲಿಂದ ಬಂದ 8 ಮಂದಿಯ ಈ ಗುಂಪಿಗೆ ದೆಹಲಿ ಬಿಜೆಪಿ ಘಟಕ ಅದ್ದೂರಿ ಸ್ವಾಗತ ನೀಡಿದೆ. ಕಚೇರಿಯಲ್ಲಿ ಸನ್ಮಾನ ಮಾಡಿದೆ. ಇದು ಚರ್ಚೆಗೆ ಕಾರಣ ಆಗಿದೆ. ಆಪ್ ಪಕ್ಷದ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನೋಡಿ ಇದೇ ಬಿಜೆಪಿಯ ನಿಜವಾದ ಮುಖ. ಗುಂಡಾಗಳು, ಲುಚ್ಚ ಲಪಂಗಗಳಿಗೆಲ್ಲ ಸನ್ಮಾನ ಮಾಡಿದ್ದಾರೆ. ಅದಕ್ಕೆ ಹೇಳೋದು ಬಿಜೆಪಿ ಅಂದರೆ ಗುಂಡಾಗಳು ಮತ್ತು ರೇಪಿಸ್ಟ್ ಗಳ ಪಕ್ಷ ಎಂದು ಆಪ್ ಪಕ್ಷದ ನಾಯಕಿ ಆತಿಷಿ ಆರೋಪಿಸಿದ್ದಾರೆ.

ಈ ರೀತಿ ಸನ್ಮಾನ ಮಾಡುವ ಮೂಲಕ ದೇಶದಲ್ಲಿ ಇರುವ ಕಾರ್ಯಕರ್ತರಿಗೆಲ್ಲ ದಾಳಿ, ದಾಂಧಲೆ, ಈವ್ ಟೀಸಿಂಗ್ ಮಾಡಿ ಎಂದು ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಕಿಧಿಕಾರಿದ್ದಾರೆ. ಬಹುಷಃ ಇಂಥಾದ್ದೆಲ್ಲ ಬಿಜೆಪಿ DNA ನಲ್ಲೆ ಇದೇ ಎಂದು ಅತಿಷಿ ಬಿಜೆಪಿ ಮೇಲೆ ಮುಗಿಬಿದ್ದಿದ್ದಾರೆ.