ದೆಹಲಿ ಸರ್ಕಾರದ ಅಬಕಾರಿ ನೀತಿ ಪ್ರಕರಣಕ್ಕೆ (Delhi Excise Policy Case) ಸಂಬಂಧಪಟ್ಟಂತೆ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಇಂದು ಶುಕ್ರವಾರ ದಾಳಿ ನಡೆಸಿದೆ.
ಬೆಂಗಳೂರು, ಮಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ 50ಕ್ಕೂ ಹೆಚ್ಚು ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಶೋಧ ಕಾರ್ಯ ಮುಂದುವರಿದಿದೆ. ಬೆಳ್ಳಂಬೆಳಗ್ಗೆ ರೇಡ್ ಮಾಡಿರುವ ಇಡಿ ಅಧಿಕಾರಿಗಳು ಕಡೆ ಪರಿಶೀಲನೆ ನಡೆಸುತ್ತಿದ್ದಾರೆ.ಹಲವು ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ದೆಹಲಿಯ ಆಪ್ ಸರ್ಕಾರದ ಮೇಲೆ ಲಿಕ್ಕರ್ ಪಾಲಿಸಿ ಹಗರಣ (Delhi Excise Policy Case) ಆರೋಪ ಕೇಳಿಬಂದು ತೀವ್ರ ಕೋಲಾಹಲ ಸೃಷ್ಟಿಯಾಗಿತ್ತು. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ, ಕಚೇರಿ ಮೇಲೆ ಇಡಿ, ಸಿಬಿಐ ದಾಳಿ ನಡೆದಿದ್ದವು. ಇದನ್ನೂ ಓದಿ : Chinese Loan Apps Case : ರೇಜರ್ ಪೇ, ಪೇಟಿಎಂ ಕಚೇರಿಗಳ ಮೇಲೆ ಇಡಿ ದಾಳಿ