ಇಂದು ಗುರುವಾರ ವಿಶ್ವಾಸ ಮತ ಯಾಚನೆಗಾಗಿ ಪಂಜಾಬ್ ರಾಜ್ಯ ಸರ್ಕಾರ ಕರೆದಿದ್ದ ಒಂದು ದಿನದ ವಿಶೇಷ ಅಧಿವೇಶನವನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಹಿಂಪಡೆದಿದ್ದಾರೆ. ರಾಜ್ಯಪಾಲರ ಈ ನಡೆಗೆ ದೆಹಲಿಯ ಎಎಪಿ ಮುಖ್ಯಮಂತ್ರಿ ಹಾಗೂ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಜಾಪ್ರಭುತ್ವ ಅಂತ್ಯಗೊಂಡಿದೆ (Democracy is Over) ಎಂದು ಕೆಂಡಕಾರಿದ್ದಾರೆ.
ಬಿಜೆಪಿ ಪಂಜಾಬ್ ಎಎಪಿಯ 10 ಜನ ಶಾಸಕರನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಆ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಎಎಪಿ ವಿಶೇಷ ಅಧಿವೇಶನ ಕರೆದಿತ್ತು.
ಎರಡು ದಿನಗಳ ಹಿಂದೆ ಅಧಿವೇಶನಕ್ಕೆ ಅನುಮತಿ ನೀಡಿದ್ದ ರಾಜ್ಯಪಾಲರು, ತಮ್ಮ ಅನುಮತಿ ವಾಪಾಸ್ ಪಡೆದುಕೊಂಡಿದ್ದಾರೆ. ಇಂದು ನಡೆಯಬೇಕಿದ್ದ ಅಧಿವೇಶನ ಮೊಟಕುಗೊಂಡಿದೆ. ಇದನ್ನೂ ಓದಿ : CM Bhagwanth Mann : ಪಂಜಾಬ್ ಸಿಎಂರನ್ನು ವಿಮಾನದಿಂದ ಕೆಳಗಿಸಿದ ಸಿಬ್ಬಂದಿ?
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಇದು ಪ್ರಜಾಪ್ರಭುತ್ವದ ಕೊಲೆ ಎಂದು ಬಣ್ಣಿಸಿದ್ದಾರೆ.‘‘ಸಚಿವ ಸಂಪುಟ ಕರೆದಿರುವ ಅಧಿವೇಶನವನ್ನು ರಾಜ್ಯಪಾಲರು ನಿರಾಕರಿಸಿದರೆ ಹೇಗೆ?.. ಹಾಗಾದರೆ ಪ್ರಜಾಪ್ರಭುತ್ವ ಮುಗಿಯಿತು (Democracy is Over). ಎರಡು ದಿನಗಳ ಹಿಂದೆ ರಾಜ್ಯಪಾಲರು ಅಧಿವೇಶನಕ್ಕೆ ಅನುಮತಿ ನೀಡಿದ್ದರು.
ಆಪರೇಷನ್ ಕಮಲ ವಿಫಲವಾಗಲು ಆರಂಭಿಸಿ ನಂಬರ್ ಬಾರದೆ ಇದ್ದಾಗ ಹಿಂಪಡೆಯುವಂತೆ ಮೇಲಿನಿಂದ ಕರೆ ಬಂದಿತ್ತು. ಇಂದು ದೇಶವು ಒಂದು ಕಡೆ ಸಂವಿಧಾನ ಮತ್ತು ಇನ್ನೊಂದು ಕಡೆ ಆಪರೇಷನ್ ಕಮಲವನ್ನು ಹೊಂದಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಬಿಜೆಪಿಗೆ ಸೇರ್ಪಡೆ; PLC ಪಕ್ಷ ವಿಲೀನ