ಕೋಳಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಒಂದು ಸರಣಿ ಅಪಘಾತಕ್ಕೀಡಾಗಿ ಹೆದ್ದಾರಿಯಲ್ಲಿ ಉರುಳಿಬಿದ್ದ ಹಿನ್ನೆಲೆಯಲ್ಲಿ ಕೋಳಿಗಳನ್ನು ಹೊತ್ತೊಯ್ಯಲು ಜನರ ನೂಕುನುಗ್ಗಲು ಏರ್ಪಟ್ಟ ಘಟನೆ ಉತ್ತರಪ್ರದೇಶಗಲ್ಲಿ ನಡೆದಿದೆ.
ಇಲ್ಲಿನ ದಿಲ್ಲಿ- ಆಗ್ರಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮಂಜು ಕವಿದ ವಾತಾವರಣದಿಂದಾಗಿ ರಸ್ತೆ ಕಾಣದೆ ಒಂದಕ್ಕೊಂದರಂತೆ ಸುಮಾರು 12 ವಾಹನಗಳು ಪರಸ್ಪರ ಡಿಕ್ಕಿಯಾಗಿವೆ. ಕೋಳಿಗಳನ್ನು ಸಾಗಿಸುತ್ತಿದ್ದ ಟ್ರಕ್ ಕೂಡ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ. ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಒಂದೆಡೆ ಡ್ರೈವರ್ ಮತ್ತು ಕ್ಲೀನರ್ ಈ ಅಪಘಾತದಲ್ಲಿ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ, ಮತ್ತೊಂದೆಡೆ ಸಾಗರೋಪಾದಿಯಲ್ಲಿ ಸೇರಿದ್ದ ಅಕ್ಕಪಕ್ಕದ ಗ್ರಾಮಗಳ ಜನರು ಕೋಳಿಗಳನ್ನು ಹೊತ್ತೊಯ್ಯುವಲ್ಲಿ ಮಗ್ನರಾಗಿದ್ದರು.
ಹೀಗಾಗಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸಾವಿರಾರು ಕೋಳಿಗಳು ಟ್ರಕ್ ನಿಂದ ಕಳ್ಳತನವಾಗಿದ್ದು ಪೌಲ್ಟ್ರಿ ಮಾಲೀಕನಿಗೆ ನಷ್ಟವುಂಟಾಗಿದೆ.