ಧರ್ಮಸ್ಥಳದಲ್ಲಿ ಅನ್ನಪ್ರಸಾದ ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಶಾಸಕ ಆರ್ ಅಶೋಕ್ ಅವರು ಟೀಕೆ ಮಾಡುತ್ತಿದ್ದ ವೇಳೆ ಮಧ್ಯಪ್ರವೇಶ ಮಾಡಿದ ಹೆಚ್ಡಿಕೆ ಈ ಹೇಳಿಕೆ ನೀಡಿದ್ದಾರೆ.
ಅಧ್ಯಕ್ಷರೇ, ಅಶೋಕಣ್ಣ ಒಂದ್ನಿಮಿಷ..ಅಶೋಕಣ್ಣ ಒಂದ್ನಿಮಿಷ..ಈ 55 ಲಕ್ಷ ಜನ ಹೆಣ್ಮಕ್ಕಳು ಓಡಾಟ ಮಾಡೋಕೆ ಶುರು ಮಾಡಿ..ಧರ್ಮಸ್ಥಳದಲ್ಲಿ ಹೋದಾಗ್ಲೆಲ್ಲ ಕರೆಕ್ಟಾಗಿ ಊಟ ಕೊಡ್ತಿದ್ರು. ಈ ಊಟವನ್ನು ನಿಲ್ಲಿಸಿಬಿಟ್ಟಿದ್ದಾರಂತಲ್ವಾ..ಮೊನ್ನೆ ಅದ್ಯಾವುದೋ ನೋಡ್ತಿದೆ..
ಎಂದು ಕುಮಾರಸ್ವಾಮಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಶಕ್ತಿ ಯೋಜನೆಯ ಕಾರಣದಿಂದ ಜನರ ಓಡಾಟ ಜಾಸ್ತಿಯಾಗಿರುವ ಕಾರಣ ಧರ್ಮಸ್ಥಳದಲ್ಲಿ ಊಟ ಕೊಡುವುದು ನಿಲ್ಲಿಸಿಬಿಟ್ಟಿದ್ದಾರೆ ಎಂದು ಹೆಚ್ಡಿಕೆ ಹೇಳಿದ್ದಾರೆ.
ADVERTISEMENT
ADVERTISEMENT