ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ ತನು ಸ್ಪಂದಿಸದವರ ಮನ ಸ್ಪಂದಿಸುವ,ಹಾಸಿಗೆ ಬಿಟ್ಟು ಮೇಲೇಳಲಾಗದವರ ಮನೆ ಮನೆಗೆ ಹೋಗಿ ಅವರಿಗೆ ಸಾಂತ್ವನದ ನುಡಿಗಳನ್ನಾಡಿಸಿ ಹಾಡು ಹರಟೆಯೊಂದಿಗೆ ಎಪ್ಪತ್ತೈದನೆಯ ಸ್ವಾತಂತ್ರ್ಯದಿನಾಚರಣೆಯ ಸವಿಯನ್ನುಣಿಸುವ ಕಾರ್ಯಕ್ರಮ ತುಡಿತಕ್ಕೆ ಇಂದು ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀ.ಬಿ.ಸೋಮಶೇಖರ.ಶೆಟ್ಟಿಯವರು ನೆರವೇರಿಸಿದರು.
ನಂತರ ಮಾತನಾಡಿದ ಅವರುಶಾಲಾ ಪರಿಸರದಲ್ಲಿ ಇಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ಜೀವನದ ನೈಜ ಚಿತ್ರಣ ಹಾಗೂ ಅನೇಕ ಅನುಭವಗಳನ್ನು ಒದಗಿಸಿಕೊಡುವುದು ಇಂತಹ ಕಾರ್ಯಕ್ರಮ. ಎಲ್ಲವೂ ಇದ್ದು ಎನೂ ಇಲ್ಲ ಎಂಬುದನ್ನು ಕೊರಗುವ ಬದಲು ಇಂತಹ ವ್ಯಕ್ತಿಗಳನ್ನು ಕಂಡು ಜೀವನಾನುಭವ ಪಡೆದು ಸಾರ್ಥಕ ಬದುಕು ನಡೆಸಬೇಕು.ತಾನೂ ಬಾಳಿ ಇತರರನ್ನು ಬಾಳಲು ಬಿಡಬೇಕು.
ಸಾಧ್ಯವಾದಷ್ಟು ನಮ್ಮ ಕೈಲಾದ ಸಹಾಯವನ್ನು ಮಾಡುವ ಪಣತೊಡಬೇಕು ಎಂದರು.
ನಂತರ ಮಾತನಾಡಿದ ಬಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಳ್ತಂಗಡಿ ಇದರ ಸದಸ್ಯರಾಗಿರುವ ಶ್ರೀ. ಶಿವಕುಮಾರ್ ಎಸ್.ಎಂ.ಮಾತನಾಡುತ್ತಾ ಅನುಭವಗಳು ಹೊಸತಲ್ಲ ಅದರಿಂದ ಕಲಿತ ಪಾಠ ಹೊಸತು. ಶಾಲೆ ಕೇವಲ ಪಠ್ಯಕ್ಕೆ ಮಾತ್ರ ಸೀಮಿತ ಆಗಿರದೆ ಜೀವನಕ್ಕಾಗುವ ಅನುಭವಗಳನ್ನು ನೀಡಬೇಕು.ಆ ಕೆಲಸ ಈ ಶಾಲೆಯಲ್ಲಾಗುತ್ತಿದೆ.ಯಾವುದೇ ಕ್ಷಣದಲ್ಲಾಗಲಿ ಧೃತಿಗೆಡದೆ ಬದುಕುವ ಕಲೆ ವಿದ್ಯಾರ್ಥಿಗಳಿಗೆ ರೂಢಿಯಾಗೋದು ಪ್ರಾಪಂಚಿಕ ಅನುಭವಗಳನ್ನು ತೆರೆದಿಟ್ಟಾಗಲೇ.
ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳು ಆಗಿ ಮಾದರಿಯಾಗಿರಿ.ಸಹಾಯ ಮಾಡುವ ಹಸ್ತ ನೊಂದವರ ಕಣ್ಣೀರು ಒರಸುವ ಹಸ್ತ ನಿಮ್ಮದಾಗಲಿ ಎಂದು ನುಡಿದರು.
ADVERTISEMENT
ತದನಂತರ ಸಂಜೆವಾಣಿ ಪತ್ರಿಕೆಯ ವರದಿಗಾರರಾಗಿರುವ ಶ್ರೀ ಧನಕೀರ್ತಿ ಆರಿಗ ಇವರು ಕಾರ್ಯಕ್ರಮವನ್ನು ಶ್ಲಾಘಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು.
ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಲಿ ಹಾಗೂ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವಂತಾಗಲಿ ,ಈ ಕಾರ್ಯಕ್ರಮವು ಇನ್ನಷ್ಟು ಕಡೆಗಳಲ್ಲಿ ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ. ಪರಿಮಳ ಎಂ.ವಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.ಶಾಲಾ ಶಿಕ್ಷಕ ಶ್ರೀ.ಕಾರ್ತಿಕೇಶ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕುಮಾರಿ ಸ್ಪೂರ್ತಿ ವಂದಿಸಿದರು.
ಶಾಲೆಯ ಯುವ ರೆಡ್ ಕ್ರಾಸ್ ಆರೋಗ್ಯ ಹಾಗೂ ನೈರ್ಮಲ್ಯ ಸಂಘದವರು ನೆರವೇರಿಸಿದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಾಕ್ಷಿಗಳಾದರು.
ADVERTISEMENT