ADVERTISEMENT
ಕ್ರಿಕೆಟಿಗ ಶಿವರ್ ಧವನ್ ಕುಟುಂಬದ ಕಾರ್ಯಕ್ರಮಕ್ಕೆ ಅವರ ಮಗನನ್ನು ಭಾರತಕ್ಕೆ ಕರೆದುಕೊಂಡು ಬರುವಂತೆ ಶಿಖರ್ ಧವನ್ ಅವರ ಪತ್ನಿಗೆ ದೆಹಲಿಯ ಕೌಟುಂಬಿಕ ನ್ಯಾಯಾಲಯ ಸೂಚಿಸಿದೆ.
ಧವನ್ ಮತ್ತು ಅವರ ಪತ್ನಿ ಆಯೆಶಾ ಮುಖರ್ಜಿ ವಿಚ್ಛೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದು ಆಯೆಷಾ ಮತ್ತು 7 ವರ್ಷದ ಮಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
ವಿಚ್ಛೇಧನ ಮತ್ತು 7 ವರ್ಷದ ಮಗ ಕುರಿತಾಗಿ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಎರಡೂ ಕಡೆಯೂ ವ್ಯಾಜ್ಯ ನಡೆಯುತ್ತಿದೆ.
ಧವನ್ ಕುಟುಂಬದ ಕಾರ್ಯಕ್ರಮವನ್ನು ಜೂನ್ 17ರಂದು ಆಯೋಜನೆ ಮಾಡಲಾಗಿತ್ತು. ಆದರೆ ಮಗನ ಶಾಲೆ ಕಾರಣದಿಂದ ಕರೆದುಕೊಂಡು ಬರಲಾಗುವುದಿಲ್ಲ ಎಂದು ಆಯೆಷಾ ಕಾರಣ ನೀಡಿದ ಹಿನ್ನೆಲೆಯಲ್ಲಿ ಜುಲೈ 1ಕ್ಕೆ ಕಾರ್ಯಕ್ರಮ ಮರು ನಿಗದಿಯಾಗಿದೆ.
ಆದರೆ ಜುಲೈ 1ರ ಕಾರ್ಯಕ್ರಮಕ್ಕೂ ಮಗನನ್ನು ಕರೆದುಕೊಂಡು ಬರಲು ಆಯೆಷಾ ಒಪ್ಪಿಲ್ಲ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಂಬಂಧಿಕರ ಜೊತೆಗೆ ಸಮಾಲೋಚಿಸಿಲ್ಲ ಎಂದು ವಾದಿಸಿದ್ದರು.
2020ರ ಆಗಸ್ಟ್ನಿಂದ ಶಿಖರ್ ಧವನ್ ತಮ್ಮ ಮಗನನ್ನು ಭೇಟಿಯಾಗಿಲ್ಲ.
ಮಗುವಿನ ಮೇಲೆ ಕೇವಲ ತಾಯಿಗಷ್ಟೇ ಹಕ್ಕಿಲ್ಲ, ಹೀಗಿರುವಾಗ ಆಕೆಯ ಧವನ್ ತನ್ನ ಮಗನನ್ನು ಭೇಟಿಯಾಗಬಾರದು ಎಂದು ಏಕೆ ವಿರೋಧಿಸುತ್ತಿದ್ದಾರೆ, ಅರ್ಜಿದಾರರ (ಧವನ್) ಆ ಮಗುವಿಗೆ ಕೆಟ್ಟ ತಂದೆಯೇನು ಅಲ್ವಲ್ಲ
ಎಂದು ಕೌಟುಂಬಿಕ ನ್ಯಾಯಾಲಯ ಧವನ್ ಪತ್ನಿಗೆ ಛೀಮಾರಿ ಹಾಕಿದೆ.
ಮೂಲತಃ ಭಾರತೀಯರಿಯಾಗಿರುವ ಆಯೇಷಾ ಅವರು ಮಗುವಿನ ಬದುಕಿನಲ್ಲಿ ಕುಟುಂಬ ಸದಸ್ಯರ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕೌಟುಂಬಿಕ ನ್ಯಾಯಾಲಯ ಹೇಳಿದೆ.
ADVERTISEMENT