ICC T20 ಕ್ರಿಕೆಟ್ಗೆ ಇಂದು ಭಾರತದ ಕ್ರಿಕೆಟ್ ತಂಡ ಪ್ರಕಟವಾಗಿದೆ. ಇದರಲ್ಲಿ ಡಿಕೆ ಎಂದೇ ಖ್ಯಾತಿಯಾಗಿರುವ ದಿನೇಶ್ ಕಾರ್ತಿಕ್ (Dinesh Karthik) ಅವಕಾಶ ಪಡೆದುಕೊಂಡಿದ್ದಾರೆ. ಆ ಮೂಲಕ ಆರ್ಸಿಬಿಯ ಗ್ರೇಟ್ ಫಿನಿಶರ್ಗೆ ಮತ್ತೊಂದು ಅವಕಾಶ ಒದಗಿಬಂದಿದೆ.
ಐಸಿಸಿ ಟಿ20 ಕ್ರಿಕೆಟ್ಗೆ ಆಯ್ಕೆಯಾದ ಬೆನ್ನಲ್ಲೇ, ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ದಿನೇಶ್ ಕಾರ್ತಿಕ್ ‘ಕನಸುಗಳು ನನಸಾಗುತ್ತವೆ’ ಎಂದು ಬರೆದುಕೊಂಡಿದ್ದಾರೆ.
Dreams do come true 💙
— DK (@DineshKarthik) September 12, 2022
ಇತ್ತೀಚೆಗೆ ದಿನೇಶ್ ಕಾರ್ತಿಕ್ (Dinesh Karthik) ಆರ್ಸಿಬಿ ಪರವಾಗಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ಆರ್ಸಿಬಿಯ ಗ್ರೇಟ್ ಫಿನಿಶರ್ ಎಂದು ಗುರುತಿಸಿಕೊಂಡಿದ್ದರು. ಅನಂತರ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಿ ಅಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇತ್ತೀಚೆಗೆ ನಡೆದ ಏಷ್ಯಾಕಪ್ ಟಿ20 ಯಲ್ಲಿ ಅವರಿಗೆ ಬ್ಯಾಟಿಂಗ್ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ : ICC T20 World Cup : ಭಾರತ ತಂಡ ಪ್ರಕಟ, ರೋಹಿತ್ ಶರ್ಮಾಗೆ ನಾಯಕತ್ವ