No Result
View All Result
ನಿರ್ದೇಶಕ, ನಿರ್ಮಾಪಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಅವರ ಮೃತದೇಹ ಪತ್ತೆಯಾಗಿದೆ. ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
50 ವರ್ಷದ ಗುರುಪ್ರಸಾದ್ ಅವರು ಕೆಲ ತಿಂಗಳ ಹಿಂದೆ ಎರಡನೇ ಮದ್ವೆಯಾಗಿದ್ದರು. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಉಂಟಾಗಿದೆ. ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ.
ಮಠ, ಎದ್ದೇಳು ಮಂಜುನಾಥ ಸಿನಿಮಾ ಮೂಲಕ ಗುರುಪ್ರಸಾದ್ ಅವರು ಪ್ರಸಿದ್ಧರಾಗಿದ್ದರು. ಡೈರೆಕ್ಟರ್ ಸ್ಪೆಷಲ್ ಸಿನಿಮಾವನ್ನೂ ನಿರ್ದೇಶನ ಮಾಡಿದ್ದರು. ನಟ ಜಗ್ಗೇಶ್ ನಟನೆಯ ರಂಗನಾಯಕ ಸಿನಿಮಾವನ್ನೂ ನಿರ್ದೇಶನ ಮಾಡಿದ್ದರು.
ಇತ್ತೀಚೆಗೆ ಗುರುಪ್ರಸಾದ್ ಎರಡನೇ ಮದುವೆ ಬಗ್ಗೆ ಮಾತಾಡಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು, ಎರಡನೇ ಮದುವೆ ಬಗ್ಗೆ ಮಾತಾಡಿದ್ದಾರೆ.
ʻನನ್ನ ಜೀವನವನ್ನು ಇಟ್ಟುಕೊಂಡೇ ದೀಪಕ್ ಮಧುವನಹಳ್ಳಿ ಬರೆದಂತೆ ಇದೆ. ಈ ಹಾಡು ನನ್ನ ಬದುಕಿಗೆ ತೀರಾ ಹತ್ತಿರವಾಗಿದೆ. ನನಗೆ ಮೊದಲನೇ ಲವ್ ವಿಫಲ ಆಯ್ತು. ವಿಫಲ ಆಗಿ ಡಿವೋರ್ಸ್ ಕೂಡ ಆಗುತ್ತಿದೆ. ಹಾಗೆ ನೋಡಿದರೆ, ನನ್ನ ಈ ಪರಿಸ್ಥಿತಿಗೆ ಈ ಹಾಡು ಯೋಗ್ಯ ಅಂತ ಅನಿಸುತ್ತದೆ. ಇಷ್ಟು ಆದ್ಮೇಲೆ ಸುಮ್ಮನೆ ಇರಬೇಕಿತ್ತಲ್ವಾ? ಇನ್ನೊಂದು ಮದುವೆಯಾದೆ. ಎರಡು ವರ್ಷದ ಮಗುನೂ ಇದೆ. ಇದೆ ಬೇಕಿತ್ತಾ? ಅನಿಸುತ್ತದೆ ಎಂದು ಗುರುಪ್ರಸಾದ್ ವಿಡಿಯೋದಲ್ಲಿ ಹೇಳಿದ್ದರು.
No Result
View All Result
error: Content is protected !!