ತಿರುಮಲದ ತಿರುಮಾಡ ಬೀದಿಯಲ್ಲಿ ಚಪ್ಪಲಿ ಧರಿಸಿದ್ದಲ್ಲದೆ, ದೇವಾಲಯದ ಬಳಿ ಫೋಟೋ ಶೂಟ್ ಮಾಡಿಸಿಕೊಂಡು ವಿವಾದಕ್ಕೆ ಗುರಿಯಾದ ನಟಿ ನಯನತಾರ ದಂಪತಿ ಆಗಿರುವ ಪ್ರಮಾದಕ್ಕೆ ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ.


ನಿರ್ದೇಶಕ ವಿಗ್ನೇಶ್ ಶಿವನ್ ಬರೆದ ಪತ್ರ ಹೀಗಿದೆ..
ಕಳೆದ 30 ದಿನಗಳಲ್ಲಿ ಐದನೇ ಬಾರಿ ಬೆಟ್ಟಕ್ಕೆ ಬಂದಿದ್ದೇವೆ. ಇಲ್ಲಿಯೇ ದೇವರ ಸನ್ನಿಧಿಯಲ್ಲಿ ಮದುವೆ ಆಗಲು ಬಯಸಿದ್ದೆವು. ಆದರೇ ಹಲವು ಕಾರಣಗಳಿಂದ ಅದು ಸಾಧ್ಯ ಆಗಲಿಲ್ಲ. ಮಹಾಬಲಿಪುರಂನಲ್ಲಿ ಮದುವೆ ಆದೆವು. ದೇವರ ಆಶೀರ್ವಾದ ಪಡೆಯಲು ಮದುವೆ ಮಂಟಪದಿಂದ ನೇರವಾಗಿ ಇಲ್ಲಿ ಬಂದು ಶ್ರೀವಾರಿಯ ದರುಶನ ಪಡೆದೆವು. ಇಲ್ಲಿಯೇ ಮದುವೆಯಾದೆವು ಎಂಬ ಭಾವನೆ ಬರಲು ಫೋಟೋ ಶೂಟ್ ಮಾಡಿಸಿಕೊಳ್ಳಲು ಯತ್ನಿಸಿದೆವು. ಆದರೇ ಭಕ್ತರ ಸಂಖ್ಯೆ ಹೆಚ್ಚಿದ್ದ ಕಾರಣ ಹೊರಗೆ ಹೋಗಿ ಮತ್ತೆ ವಾಪಾಸ್ ಅದೆವು. ವಾಪಸ್ ಬಂದು ಫೋಟೋ ಶೂಟ್ ಮಾಡಿಸಿಕೊಂಡೆವು. ತಿರುಮಾಡ ಬೀದಿಯಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದು ನಮ್ಮ ಅರಿವಿಗೆ ಬರಲಿಲ್ಲ. ಗೊತ್ತಿಲ್ಲದೇ ಆದ ತಪ್ಪಿಗೆ ಕ್ಷಮೆ ಇರಲಿ. ನಾವು ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲೆ ಅಪಾರ ಭಕ್ತಿ ಹೊಂದಿದ್ದೇವೆ. ನಾವು ಇಷ್ಟಪಟ್ಟು ಆರಾಧಿಸುವ ದೈವಕ್ಕೆ ಅಪಮಾನ ಮಾಡುವ ಉದ್ದೇಶ ಹೊಂದಿರಲಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ.
ಇಂತಿ ನಿಮ್ಮ
ವಿಗ್ನೇಶ್ ಶಿವನ್