ಸಿಬಿಐ ತನಿಖೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ನಿರಾಳತೆ ಸಿಕ್ಕಿದೆ.
ಸಿಬಿಐ ತನಿಖೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹಿಂಪಡೆಯಲು ಕರ್ನಾಟಕ ಹೈಕೋರ್ಟ್ ಡಿಕೆಶಿವಕುಮಾರ್ ಅವರಿಗೆ ಅನುಮತಿ ನೀಡಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ರಿಟ್ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿದೆ.
ರಿಟ್ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ಡಿಕೆಶಿವಕುಮಾರ್ ಸಲ್ಲಿಸಿದ್ದ ಮೆಮೋವನ್ನು ಹೈಕೋರ್ಟ್ ಮಾನ್ಯ ಮಾಡಿದೆ.
ಗೊಂದಲದಲ್ಲಿ ಸಿಬಿಐ:
ಒಂದು ವೇಳೆ ರಿಟ್ ಅರ್ಜಿಯನ್ನು ಹಿಂಪಡೆಯಲು ಡಿ ಕೆ ಶಿವಕುಮಾರ್ ಅವರಿಗೆ ಅವಕಾಶ ನೀಡದೇ ಇದ್ದಿದ್ದರೆ ಇದರೊಂದಿಗೆ ಸಿಬಿಐ ಹೈಕೋರ್ಟ್ನಲ್ಲೇ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಕಾನೂನು ಹೋರಾಟ ಮುಂದುವರಿಸಬಹುದಿತ್ತು.
ಜೊತೆಗೆ ಆ ಅರ್ಜಿಯ ವಿಚಾರಣೆ ವೇಳೆಗೆ ತನ್ನ ತನಿಖೆ ಪೂರ್ಣಗೊಂಡಿದೆ ಎಂದು ಹೇಳಬಹುದಿತ್ತು.
ಈಗ ರಿಟ್ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿರುವ ಕಾರಣ ಹೈಕೋರ್ಟ್ನಲ್ಲಿ ಪ್ರಕರಣ ಮುಕ್ತಾಯವಾಗಿದೆ.
ಇತ್ತ ರಾಜ್ಯ ಸರ್ಕಾರ ಕೂಡಾ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ. ಸರ್ಕಾರ ನೀಡಿರುವ ಅನುಮತಿಯನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಲು ಅವಕಾಶ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸಿಬಿಐ ತನ್ನ ಕಾನೂನು ತಂಡದ ಮೊರೆ ಹೋಗಬೇಕಾಗುತ್ತದೆ.
ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಮೇಲ್ಮನವಿಯನ್ನೂ ಸಲ್ಲಿಸಬೇಕಾಗುತ್ತದೆ. ಆದರೆ ಸಿಬಿಐ ಕಾನೂನು ಕ್ರಮಕ್ಕೆ ಪ್ರತಿಯಾಗಿ ಡಿಕೆಶಿವಕುಮಾರ್ ಅವರಿಗೂ, ರಾಜ್ಯ ಸರ್ಕಾರಕ್ಕೂ ಪ್ರತಿ ಹೋರಾಟಕ್ಕೆ ಅವಕಾಶ ಇರುವುದರಿಂದ ಸಿಬಿಐ ಅಡಕತ್ತರಿಯಲ್ಲಿ ಸಿಲುಕಿದೆ.
ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆದ ಬಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.
ಡಿಕೆಶಿವಕುಮಾರ್ ಅವರು ಮೇಲ್ಮನವಿ ಅರ್ಜಿಯನ್ನು ವಾಪಸ್ ಪಡೆಯುತ್ತಿರುವ ಬಗ್ಗೆ ಸಿಬಿಐ ಆಕ್ಷೇಪಿಸಿತು.
ಒಂದು ವೇಳೆ ಸಿಬಿಐ ಬಯಸುವುದಾದರೆ, ಕಾನೂನಿನಲ್ಲಿ ಅದಕ್ಕೆ ಅನುಮತಿ ಇದೆ ಎಂದಾದಲ್ಲಿ ನೀವು ನಿಮ್ಮ ಎಫ್ಐಆರ್ನೊಂದಿಗೆ ಮುಂದುವರೆಯಬಹುದು ಎಂದು ಹೈಕೋರ್ಟ್ ಸಿಬಿಐಗೆ ಹೇಳಿತು.
ADVERTISEMENT
ADVERTISEMENT