ಕರ್ನಾಟಕ ರಾಜ್ಯಕ್ಕೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ. ಕುಣಿಗಲ್ಗೆ ನಾನೇ ಮುಖ್ಯಮಂತ್ರಿ ಎಂದು ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ ರಂಗನಾಥ್ ಅವರು ಕುಣಿಗಲ್ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
`ಡಿ.ಕೆ.ಶಿವಕುಮಾರ್ ಸಾಹೇಬರು ಮುಖ್ಯಮಂತ್ರಿ ಆಗ್ತಾರೆ. ಕುಣಿಗಲ್ಗೆ ಯಾರು ಮುಖ್ಯಮಂತ್ರಿ..? ನಾನೇ ಮುಖ್ಯಮಂತ್ರಿ. ಈ ಸವಾಲನ್ನು ಎದುರಿಸುವ ಮನಸ್ಥಿತಿಯೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ಗೆ ಸಪೋರ್ಟ್ ಮಾಡಿ. ಕುಟುಂಬ ಆರ್ಶೀವಾದ ಇರಲಿ, ರೋಡ್ ರಸ್ತೆ ಏನಿದ್ದರೂ ಮಾಡೋಣ‘
ಎಂದು ಡಾ ರಂಗನಾಥ್ ದೊಡ್ಡಯ್ಯ ಅವರು ಕ್ಷೇತ್ರದಲ್ಲಿ ಜನರ ಬಳಿ ಹೇಳುತ್ತಿರುವ 28 ಸೆಕೆಂಡ್ಗಳ ವೀಡಿಯೋವೊಂದು ಲಭ್ಯವಾಗಿದೆ.
ಈ ಮೂಲಕ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ಬೇಕು ಎಂದು ಹೇಳಿದ ಮೊದಲ ಕಾಂಗ್ರೆಸ್ ಶಾಸಕ. ಇವರು ಡಿ ಕೆ ಶಿವಕುಮಾರ್ ಸಂಬಂಧಿ ಕೂಡಾ ಹೌದು. ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟರ್ಗಳಲ್ಲೂ ಡಾ ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಅವರ ಫೋಟೋಗಳನ್ನಿಟ್ಟು ಪ್ರಚಾರ ಮಾಡುತ್ತಿದ್ದಾರೆ. ಆ ಪೋಸ್ಟರ್ಗಳಲ್ಲಿ ಕಾಂಗ್ರೆಸ್ನ ಯಾವ ಉಳಿದ ನಾಯಕರ ಫೋಟೋಗಳೂ ಇಲ್ಲ.