ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಸಮನ್ಸ್ ನೀಡಿದ್ದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ದೆಹಲಿಯ ವಿದ್ಯುತ್ ಲೇನ್ನಲ್ಲಿರುವ ED ಕಚೇರಿಗೆ ಡಿಕೆ ಶಿವಕುಮಾರ್ ಆಗಮಿಸಿದ್ದು ವಿಚಾರಣೆ ಮಧ್ಯೆ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದೆ ಎಂದು ತಿಳಿದುಬಂದಿದೆ.
ದೆಹಲಿಯ ED ಕಚೇರಿಯಲ್ಲಿ ವಿಚಾರಣೆ ಎದುರಿಸಲು ಬಂದಿದ್ದ ಡಿಕೆ ಶಿವಕುಮಾರ್ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ವಿಚಾರಣೆ ವೇಳೆ ವೈದ್ಯರ ನೆರವು ಕೋರಿದ್ದಾರೆ. ವೈದ್ಯರ ವಿಚಾರಣೆಗೆ ಇಡಿ ಅವಕಾಶ ಮಾಡಿಕೊಟ್ಟಿದೆ.
ಭಾರತ್ ಜೋಡೊ ಯಾತ್ರೆ ತಯಾರಿಯಲ್ಲಿದ್ದ ಡಿಕೆಶಿಗೆ (DK Shivakumar) ಇಡಿ ಶಾಕ್ ಕೊಟ್ಟಿದೆ. ವಿಧಾನಸಭೆ ಚುನಾವಣೆ ಸನಿಹವಾಗುತ್ತಿರುವ ಹೊತ್ತಲ್ಲೆ ಇಡಿ ಸಮನ್ಸ್ ನೀಡಿದೆ. ಈಗಾಗಲೇ ಒಂದು ಪ್ರಕರಣದಲ್ಲಿ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದು, ಇಡಿ ವಿಶೇಷ ನ್ಯಾಯಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ನಡುವೆ ಮತ್ತೊಮ್ಮೆ ಅಧಿಕಾರಿಗಳಿಂದ ಬುಲಾವ್ ಬಂದಿರುವುದರಿಂದ ಯಾವ ಪ್ರಕರಣಕ್ಕೆ ಸಮನ್ಸ್ ನೀಡಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವಸಿದ್ಧತೆಗಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಡಿಕೆ ಶಿವಕುಮಅರ್ ಅವರು ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ನಿರಂತರವಾಘಿ ದಣಿದಿರುವುದರಿಂದ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಎಂದು ಎನ್ನಲಾಗಿದೆ ಇದನ್ನೂ ಓದಿ : ಮನವಿ ಕೇಳಿಸಿಕೊಳ್ಳುವಷ್ಟು ಸಹನೆ ಇಲ್ಲದಿದ್ರೆ, ಶಾಸಕರಾಗೋಕೆ ಅನರ್ಹ : ಡಿಕೆಶಿ ಕಿಡಿ