ಕರ್ನಾಟಕ ಮುಖ್ಯಮಂತ್ರಿ ಆಗಿ ನಾಳೆಯೇ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಅಧಿಕಾರ ಹಂಚಿಕೆಯ ಸೂತ್ರವನ್ನು ಮುಂದಿಟ್ಟಿದ್ದರೂ ಸಿದ್ದರಾಮಯ್ಯ ಒಪ್ಪಿಕೊಂಡಿಲ್ಲ.
ಮೂಲಗಳ ಪ್ರಕಾರ ಐದು ವರ್ಷಗಳ ಪೂರ್ಣಾವಧಿಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲ ಎರಡು ವರ್ಷ ಸಿದ್ದರಾಮಯ್ಯ ಮತ್ತು ಉಳಿದ ಮೂರು ವರ್ಷ ಡಿಕೆಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂಬ ಸೂತ್ರವನ್ನು ಹೈಕಮಾಂಡ್ ಮುಂದಿಟ್ಟಿತ್ತು.
ಆದರೆ ಈ ಸೂತ್ರಕ್ಕೆ ಸಿದ್ದರಾಮಯ್ಯ ಒಪ್ಪಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಅಧಿಕಾರ ಹಂಚಿಕೆ ಸೂತ್ರಕ್ಕೆ ಸಿದ್ದರಾಮಯ್ಯ ಎತ್ತಿರುವ ಆಕ್ಷೇಪಗಳು ಹೀಗಿವೆ:
1. ಎರಡು ವರ್ಷಕ್ಕಷ್ಟೇ ತಾವು ಸಿಎಂ ಎಂಬ ಸಂದೇಶ ರವಾನೆಯಾದ್ರೆ ಆಡಳಿತದಲ್ಲಿ ಬಿಗಿ ಹಿಡಿತ ತಪ್ಪಲಿದೆ, ಆಡಳಿತ ಹಳಿ ತಪ್ಪಿ ಕಾಂಗ್ರೆಸ್ ಸರ್ಕಾರ ಹಿನ್ನಡೆ ಆಗಲಿದೆ.
2. ಐದು ವರ್ಷಗಳ ಪೂರ್ಣಾವಧಿ ಆಡಳಿತ ಸಿಕ್ಕರೇ ಮಾತ್ರ ಕಾಂಗ್ರೆಸ್ ಘೋಷಣೆಗಳನ್ನು ಸಮರ್ಥವಾಗಿ ಜಾರಿಗೊಳಿಸಬಹುದು.
3. ಅವಧಿಗೂ ಮೊದಲೇ ತಮ್ಮನ್ನು ಅಧಿಕಾರದಿಂದ ಇಳಿಸಿದರೆ ಕಾಂಗ್ರೆಸ್ಗೆ ಮುಂದಿನ ಚುನಾವಣೆಯಲ್ಲಿ ಅಹಿಂದ ಮತ ನಷ್ಟ ಆಗಬಹುದು.
4. 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಸುಭದ್ರ ಮತ್ತು ಸಮರ್ಥ ಆಡಳಿತ ನೀಡುವುದು ಅನಿವಾರ್ಯ. ಮಧ್ಯಾವಧಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯಿಂದ ಈ ಉದ್ದೇಶಕ್ಕೆ ಹಿನ್ನಡೆ ಆಗಬಹುದು.
5. ಡಿಕೆಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳಿರುವ ಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧವೇ ಕಾಂಗ್ರೆಸ್ ಹೋರಾಡಿ ಅಧಿಕಾರಕ್ಕೆ ಬಂದಿರುವ ಕಾರಣ ಡಿಕೆಶಿ ಅವರನ್ನು ಮಧ್ಯಾವಧಿಯಲ್ಲಿ ಸಿಎಂ ಮಾಡಿದರೆ ಕಾಂಗ್ರೆಸ್ಗೆ ಅತೀ ದೊಡ್ಡ ಮುಖಭಂಗವಾಗಲಿದೆ.
ADVERTISEMENT
ADVERTISEMENT