ಚನ್ನಾಗಿ ಓದಿಕೊಂಡವರಿಗೆ ಉದ್ಯೋಗ ಬರುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ನಾಯಿ ನೋಡಿಕೊಂಡರೇ ಸಾಕು ಒಂದು ಕೋಟಿ ಸಂಬಳ ನೀಡುವ ಆಫರ್ ಅನ್ನು ಬಿಲಿಯನಿಯರ್ ಕುಟುಂಬವೊಂದು ನೀಡಿದೆ.
ಏನೆಲ್ಲಾ ಸವಲತ್ತು..?
ಭರ್ತಿ ಒಂದು ಕೋಟಿ ರೂಪಾಯಿಯ ಬಂಪರ್ ಪ್ಯಾಕೇಜ್.. ಪ್ರೈವೇಟ್ ಜೆಟ್ನಲ್ಲಿ ಸಂಚಾರ ಮಾಡುವ ಅವಕಾಶ.. ಉಚಿತ ಊಟ, ವಸತಿಯ ಸವಲತ್ತು.. ವರ್ಷಕ್ಕೆ 42 ದಿನ ರಜೆ ನೀಡುವ ಆಫರ್ ನೀಡಲಾಗಿದೆ.
ಮಾಡಬೇಕಿರುವ ಕೆಲಸ ಏನು?
ನಿತ್ಯ ನಾಯಿಗೆ ಆಹಾರ ನೀಡುವುದು.. ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ ನಾಯಿಯನ್ನು ಡಾಕ್ಟರ್ ಬಳಿ ಕರೆದೊಯ್ಯುವುದು.. ನಿತ್ಯ ನಾಯಿಗೆ ಸ್ನಾನ ಮಾಡಿಸುವುದು…. ನಾಯಿಯನ್ನು ವಾಕಿಂಗ್ಗೆ ಕರೆದೊಯ್ಯುವುದು..
ಕಂಡೀಷನ್ ಏನು?
ನಾಯಿಗಳ ಆಹಾರದ ಬಗ್ಗೆ ಚನ್ನಾಗಿ ತಿಳಿದುಕೊಂಡಿರಬೇಕು.. ತಮಗಿಂತಲೂ ಹೆಚ್ಚು ನಾಯಿಗೆ ಪ್ರಾಧಾನ್ಯತೆ ನೀಡಬೇಕು…
ಈ ಆಕರ್ಷಕ ಜಾಹಿರಾತು ಪ್ರಕಟವಾಗಿದ್ದೇ ತಡ 400ಕ್ಕೂ ಹೆಚ್ಚು ಅಪ್ಲಿಕೇಶನ್ ಬಂದಿವೆಯಂತೆ. ಇಷ್ಟು ಕಡಿಮೆನಾ ಎನ್ನಬೇಡಿ