ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ಯಾವ ಆಹ್ವಾನ ಪತ್ರಿಕೆಯೂ ಬೇಕಿಲ್ಲ ಅಂತ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ತಾವು ಭಾಗಿಯಾಗುವ ಕುರಿತಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಠಾಕ್ರೆ, ತಮಗೆ ಔಪಚಾರಿಕ ಆಹ್ವಾನ ನೀಡಲಾಗಿಲ್ಲ, ಆದರೆ ಶ್ರೀರಾಮ ಎಲ್ಲರಿಗೂ ಸೇರಿದವನಾಗಿದ್ದಾನೆ. ಹೀಗಾಗಿ ನನಗೆ ಭೇಟಿ ನೀಡಬೇಕೆಂದಾಗಲೆಲ್ಲಾ ನಾನು ರಾಮ ಮಂದಿರಕ್ಕೆ ಭೇಟಿ ನೀಡುತ್ತೇನೆ ಅಂತ ಉತ್ತರಿಸಿದ್ದಾರೆ.
ಅದಕ್ಕೆ ಮಿಗಿಲಾಗಿ ಶಿವ ಸೇನೆ ಕೂಡ ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದಿದ್ದಾರೆ.
ತಾವು ಮಹಾರಾಷ್ಟ್ರ ಸಿಎಂ ಆಗಿದ್ದ ಅವಧಿಯಲ್ಲಿ ರಾಮಮಂದಿರಕ್ಕೆ ಭೇಟಿ ನೀಡಿದ್ದೆ ಎಂದು ನೆನೆದ ಉದ್ಧವ್ ಠಾಕ್ರೆ, ಶ್ರೀರಾಮ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿಯಲ್ಲ, ಹೀಗಾಗಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ರಾಜಕೀಯಕ್ಕಾಗಿ ಬಳಸಬಾರದು. ರಾಮ ಕೋಟಿ ಕೋಟಿ ಹಿಂದೂಗಳ ನಂಬಿಕೆಯ ಧ್ಯೋತಕವಾಗಿದ್ದಾನೆ ಅಂತ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.