ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ.ಬಿ.ಯಶೋವರ್ಮ (66)ರವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿಯೇ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಶ್ರೀಯುತರು ಅಗಲಿದ್ದಾರೆ.
ಡಾ.ಬಿ.ಯಶೋವರ್ಮರವರ ಮೃತ ದೇಹ ಮಂಗಳವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಮಧ್ಯಾಹ್ನ ಸುಮಾರು 1ಗಂಟೆಗೆ ಚಾರ್ಮಾಡಿ-ಮತ್ತೂರು ಪಂಚ ಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ, ಉಜಿರೆ ಸರ್ಕಲ್ ನಿಂದ ಪಾದಯಾತ್ರೆಯ ಮೂಲಕ SDM College ಗೆ ಮೃತದೇಹವನ್ನು ತರಲಾಗುವುದು.
ಮೃತರ ಅಂತಿ ದರ್ಶನಕ್ಕೆ ಎಸ್ಡಿಎಮ್ ಕಾಲೇಜಿನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.